ನವದೆಹಲಿ, ಜೂ 08 (Daijiworld News/MSP): ಸ್ವಿಜರ್ಲೆಂಡ್ನ ಮುಂದಿನ ಭಾರತೀಯ ರಾಯಭಾರಿಯಾಗಿ ಮೋನಿಕಾ ಕಪಿಲ್ ಮೊಹ್ತಾ ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ಪ್ರಕಟಿಸಿದೆ.
ಪ್ರಸ್ತುತ, ಸ್ವೀಡನ್ನಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೊಹ್ತಾ ಭಾರತೀಯ ವಿದೇಶಾಂಗ ಸೇವೆ 1985 ರ ಬ್ಯಾಚ್ನ ಅಧಿಕಾರಿಯಾಗಿದ್ದಾರೆ.
ಮೊಹ್ತಾ ಜುಲೈ 2011 ರಿಂದ ಜನವರಿ 2015 ರವರೆಗೆ ಪೋಲೆಂಡ್ ಮತ್ತು ಲಿಥುವೇನಿಯಾದ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ, ಅವರು ನೆಹರೂ ಕೇಂದ್ರದ ನಿರ್ದೇಶಕರಾಗಿ ಮತ್ತು 2006 ರಿಂದ ಯುನೈಟೆಡ್ ಕಿಂಗ್ಡಂನ ಭಾರತದ ಹೈ ಕಮಿಷನ್ನಲ್ಲಿ ಸಚಿವರಾಗಿ (ಸಂಸ್ಕೃತಿ) ಸೇವೆ ಸಲ್ಲಿಸಿದ್ದರು.
" ಶೀಘ್ರದಲ್ಲೇ ಹುದ್ದೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ" ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.