ಉತ್ತರಾಖಾಂಡ್, ಜೂ 08 (DaijiworldNews/PY) : ಹೆಡ್ಫೋನ್ನಲ್ಲಿ ಹಾಡು ಕೇಳುತ್ತಿದ್ದ ಬಾಲಕಿಯ ಮೇಲೆ ಚಿರತೆಯೊಂದು ದಾಳಿ ನಡೆಸಿ ಸಾವನ್ನಪ್ಪಿದ ಘಟನೆ ನೈನಿತಾಲ್ ಜಿಲ್ಲೆಯ ರಾಮ್ನಗರ ಪ್ರದೇಶದಲ್ಲಿ ನಡೆದಿದೆ ಎಂದು ಅರಣ್ಯ ಅರಣ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾವನ್ನಪ್ಪಿದ್ದ ಬಾಲಕಿಯನ್ನು ರಾಮನಗರದ ಬೈಲ್ಪರಾವ್ ಅರಣ್ಯ ವ್ಯಾಪ್ತಿಯ ಚುನಾಖಾನ್ ಪ್ರದೇಶದ 8 ನೇ ತರಗತಿ ವಿದ್ಯಾರ್ಥಿನಿ ಮಮತಾ ಎನ್ನಲಾಗಿದೆ.
ಮಮತಾ ಶನಿವಾರ ಸಂಜೆ ತನ್ನ ಮನೆಯ ಸಮೀಪದಲ್ಲಿದ್ದ ಹರಿಯುವ ಕಾಲುವೆಯ ದಡದಲ್ಲಿ ಕುಳಿತು ಹೆಡ್ಫೋನ್ನಲ್ಲಿ ಹಾಡುಕೇಳುತ್ತಿದ್ದಳು. ಈ ಸಂದರ್ಭ ಇದ್ದಕ್ಕಿಂದಂತೆ ಚಿರತೆಯೊಂದು ಆಕೆಯ ಮೇಲೆ ದಾಳಿ ನಡೆಸಿದ್ದು, ಆಕೆಯನ್ನು ಅರಣ್ಯ ಪ್ರದೇಶದ ಕಡೆಗೆ ಎಳೆದುಕೊಂಡು ಹೋಗಿದೆ. ಬಳಿಕ ಬಾಲಕಿಯ ಮೃತದೇಹವು ಹತ್ತಿರದಲ್ಲಿದ್ದ ಪೊದೆಯಲ್ಲಿ ಪತ್ತೆಯಾಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ತಕ್ಷಣ ನಾವು ಸ್ಥಳಕ್ಕೆ ಧಾವಿಸಿದ್ದು, ಸ್ಥಳದಲ್ಲಿ ಹೆಡ್ಫೋನ್ ಹಾಗೂ ಬಾಚಣಿಗೆ ಕಂಡುಬಂದಿದೆ. ಬಾಲಕಿ ಹೆಡ್ಫೋನ್ ಹಾಕಿಕೊಂಡಿದ್ದ ಕಾರಣ ಆಕೆಗೆ ಚಿರತೆ ಬಂದಿದ್ದು ತಿಳಿಯಲಿಲ್ಲ ಎಂದು ರಾಮ್ನಗರದ ಬೈಲ್ಪರಾವ್ ಅರಣ್ಯ ಶ್ರೇಣಿಯ ಶ್ರೇಣಿ ಅಧಿಕಾರಿ ಸಂತೋಷ್ ಪಂತ್ ಹೇಳಿದ್ದಾರೆ.
ಘಟನೆ ನಡೆದ ಸ್ಥಳದ ಬಳಿ ಎರಡು ಪಂಜರಗಳು ಮತ್ತು ಏಳು ಕ್ಯಾಮೆರಾ ಬಲೆಗಳನ್ನು ಇಡಲಾಗಿತ್ತು. ಶನಿವಾರ ಸಂಜೆ ಗ್ರಾಮಸ್ಥರು ಎಚ್ಚರಿಕೆ ನೀಡದಿದ್ದರೆ ಚಿರತೆ ಪಂಜರದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿತ್ತು. ಚಿರತೆ ಬಲೆಗೆ ಸಿಕ್ಕಿ ಬಿದ್ದಿದೆ. ಘಟನೆ ನಡೆದ ಸ್ಥಳಕ್ಕೆ ಪುನಃ ಬಂದಿದ್ದು, ಪಂಜರದ ಕಡೆಗೆ ಅದು ಸಾಗುತ್ತಿತ್ತು. ಇದನ್ನು ನೋಡಿದ ಗ್ರಾಮಸ್ಥರು ಹೇಳಲು ಧಾವಿಸಿದ ಸಂದರ್ಭ ಚಿರತೆ ತಪ್ಪಿಸಿಕೊಂಡಿದೆ ಎಂದು ಪಂತ್ ಹೇಳಿದರು.
ಬಾಲಕಿಯ ಮೃತದೇಹವನ್ನು ಮರಣೋತ್ತರ ಆದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಸಂತ್ರಸ್ತೆಯ ಕುಂಟುಂಬಕ್ಕೆ ರಾಜ್ಯ ಅರಣ್ಯ ಇಲಾಖೆಯಿಂದ ಮೂರು ಲಕ್ಷ ರೂ ನೀಡಲಾಗಿದೆ ಎಂದು ಎಂದು ಕುಮಾವೂನ್ನ ಪಶ್ಚಿಮ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಪರಾಗ್ ಮಧುಕರ್ ಧಾಕಾಟೆ ಹೇಳಿದರು.
ಶುಕ್ರವಾರ ಚಂಪಾವತ್ ಜಿಲ್ಲೆಯ ತನಕ್ಪುರ ಪ್ರದೇಶದಲ್ಲಿ ಉರುವಲು ತರಲು ಹೋಗಿದ್ದಾಗ 65 ವರ್ಷದ ವ್ಯಕ್ತಿಯ ಮೇಲೆ ಚಿರತೆ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.