ನವದೆಹಲಿ, ಜೂ 9 (Daijiworld News/MSP): ಕೊರೊನಾ ಲಾಕ್ ಡೌನ್ ನಿಂದಾಗಿ ಸುಮಾರು ೨ ತಿಂಗಳ ಕಾಲ ತಟಸ್ಥವಾಗಿದ್ದ ದೇಶವೂ ಇದೀಗ ಅನ್ಲಾಕ್ ಕಡೆ ಸಾಗುತ್ತಿದೆ. ಮಾಲ್, ಹೋಟೆಲ್, ರೆಸ್ಟೋರೆಂಟ್, ಧಾರ್ಮಿಕ ಸ್ಥಳಗಳು, ಅಂತರರಾಜ್ಯ ಸಂಚಾರ ಆರಂಭವಾಗಿದೆ.
ಆದರೆ, ಪಶ್ಚಿಮ ಬಂಗಾಲ, ಮಿಜೋರಾಂರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಜೂ.30 ರವರೆಗೆ ಅಂದರೆ ಇನ್ನೂ ಎರಡು ವಾರಗಳ ಕಾಲ ಕಟ್ಟುನಿಟ್ಟಾದ ಲಾಕ್ಡೌನ್ ಘೋಷಣೆ ಮಾಡಿದೆ. ಜೂನ್ 9 ರಿಂದ ರಾಜ್ಯದಲ್ಲಿ ಎರಡು ವಾರಗಳ ಲಾಕ್ಡೌನ್ ವಿಸ್ತರಣೆಯಾಗಲಿದ್ದು, ಸಂಪೂರ್ಣವಾಗಿ ಎಲ್ಲವೂ ಬಂದ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಿಜೋರಾಂ ಮುಖ್ಯಮಂತ್ರಿ ಝೋರಮ್ ತಂಗಾ ನೇತೃತ್ವದ ಸಭೆಯಲ್ಲಿ ಲಾಕ್ ಡೌನ್ ವಿಸ್ತರಣೆಗೆ ನಿರ್ಧರಿಸಲಾಗಿದೆ. ಅದಕ್ಕೂ ಮುಂಚೆ ಮಿಜೋರಾಂ ಸಿಎಂ ಜೋರಾಮ್ಥಂಗಾ ಕ್ಯಾಬಿನೆಟ್ ಸಚಿವರು, ಆರೋಗ್ಯ ಮಂತ್ರಿ, ಚರ್ಚ್ಗಳು ಹಾಗೂ ಎನ್ಜಿಓಗಳೊಂದಿಗೆ ಸಭೆ ಸೇರಿ ಈ ಕುರಿತು ಚರ್ಚಿಸಿದ್ದರು.ಲಾಕ್ಡೌನ್ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳು ಇಂದೇ ಪ್ರಕಟವಾಗುವ ಸಾಧ್ಯತೆ ಇದೆ. ಇನ್ನು ಪಶ್ಚಿಮ ಬಂಗಾಳದಲ್ಲೂ ಸೋಂಕಿತರ ಸಂಖ್ಯೆ ವೃದ್ದಿಸುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಅನ್ನು ಮಾಸಾಂತ್ಯದವರೆಗೆ ವಿಸ್ತರಿಸಲಾಗಿದೆ. ಇನ್ನು ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಒಡಿಸ್ಸಾದಲ್ಲೂ ಮಾಸಾಂತ್ಯದವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ಅಲ್ಲಿನ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ.
ಅದಕ್ಕೂ ಮುಂಚೆ ಮಿಜೋರಾಂ ಸಿಎಂ ಜೋರಾಮ್ಥಂಗಾ ಕ್ಯಾಬಿನೆಟ್ ಸಚಿವರು, ಆರೋಗ್ಯ ಮಂತ್ರಿ, ಚರ್ಚ್ಗಳು ಹಾಗೂ ಎನ್ಜಿಓಗಳೊಂದಿಗೆ ಸಭೆ ಸೇರಿ ಈ ಕುರಿತು ಚರ್ಚಿಸಿದ್ದರು.
ಮಿಜೋರಾಂನಲ್ಲಿ ಇಂದು ಏಂಟು ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಪ್ರಸ್ತುತ 42 ಜನರಿಗೆ ಕೊರೊನಾ ತಗುಲಿದೆ. ಈ ಪೈಕಿ 41 ಪ್ರಕರಣಗಳು ರಾಜ್ಯದಲ್ಲಿ ಸಕ್ರಿಯವಾಗಿದ್ದು, ಒಬ್ಬ ವ್ಯಕ್ತಿ ಮಾತ್ರ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.