ನವದೆಹಲಿ, ಜೂ 9 (Daijiworld News/MSP): ಕಾಂಗ್ರೆಸ್ ಪಕ್ಷದ ಚಿಹ್ನೆಯ ಕುರಿತ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಟ್ವೀಟ್ ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಿಡಿಮಿಡಿಗೊಂಡಿದ್ದು, ಟ್ವೀಟ್ ಮೂಲಕವೇ ಅವರನ್ನು ಪ್ರಶ್ನಿಸಿದ್ದಾರೆ.
''ಕಾಂಗ್ರೆಸ್ ಪಕ್ಷದ ಚಿಹ್ನೆಯ ಕುರಿತು ಕಮೆಂಟ್ ಮಾಡಿರುವ ರಕ್ಷಣಾ ಸಚಿವರು ಚೀನಾದವರು ಭಾರತೀಯ ಭೂಪ್ರದೇಶವನ್ನು ಲಡಾಖ್ನಲ್ಲಿ ಆಕ್ರಮಿಸಿಕೊಂಡಿದ್ದಾರೆಯೇ? ಎನ್ನುವುದಕ್ಕೆ ಮೊದಲು ಉತ್ತರಿಸಿ" ಎಂದು ರಾಹುಲ್ ಗಾಂಧಿ ತೀಕ್ಷವಾಗಿ ಪ್ರಶ್ನಿಸಿದ್ದಾರೆ.
ಲಡಾಖ್ನಲ್ಲಿ ಚೀನಾ ಜೊತೆಗಿನ ಗಡಿರೇಖೆ ಬಿಕ್ಕಟ್ಟಿನ ಕೇಂದ್ರದ ಹಾಗೂ ಅಮಿತ್ ಶಾ ವಿರುದ್ದ ವಾಗ್ದಳಿ ನಡೆಸಿದ ರಾಹುಲ್ ಗಾಂಧಿ, " ಅಮಿತ್ ಶಾ ವಿರುದ್ದ ದೇಶದ ಗಡಿ ವಾಸ್ತವತೆ ಎಲ್ಲರಿಗೂ ತಿಳಿದಿದೆ" ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ 20 ನೇ ಶತಮಾನದ ಕವಿ ಮಂಜಾರ್ ಲಖನವಿ ಅವರ ಕಾವ್ಯದ ಸಾಲಿನಲ್ಲಿರುವಂತೆ ಹೃದಯ ಬದಲು "ಕೈ" ಎಂದು ಉಲ್ಲೇಖಿಸಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್ "ಕೈಯಲ್ಲಿ ನೋವು ಇದ್ದಾಗ ಚಿಕಿತ್ಸೆ ಪಡೆಯಬಹುದು. ಆದರೆ ಕೈಗೇ ನೋವು ಬಂದಾಗ ಏನು ಮಾಡಬೇಕು” ಎಂದು ವ್ಯಂಗ್ಯವಾಡಿದ್ದರು.
"ಕೈ" ಗುರುತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಚಿಹ್ನೆಯಾಗಿರುವ ಕಾರಣ ಕೆರಳಿರುವ ರಾಹುಲ್ ಟ್ವೀಟ್ ಮೂಲಕವೇ , ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಟೀಕಿಸುವ ಬದಲು, ಗಡಿ ವಿವಾದದ ಬಗ್ಗೆ ಉತ್ತರಿಸಿ ಎಂದಿದ್ದಾರೆ.