ನವದೆಹಲಿ, ಜೂ 10 (Daijiworld News/MSP): ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕೊವೀಡ್ -೧೯ ವರದಿ ನೆಗೆಟಿವ್ ಬಂದಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಜೂನ್ 7 ರಂದು ಅವರಿಗೆ ಗಂಟಲಿನಲ್ಲಿ ನೋವು, ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಐಸೊಲೇಷನ್ನಲ್ಲಿರಿಸಲಾಗಿತ್ತು. ಇದೀಗ ಆಸ್ಪತ್ರೆ ನೀಡಿದ ವರದಿಯಲ್ಲಿ ನಗೆಟಿವ್ ಬಂದಿದ್ದು, ಕ್ರೇಜಿವಾಲ್ ಕೊಂಚ ನಿರಾಳರಾಗಿದ್ದಾರೆ.
ಕೇಜ್ರಿವಾಲ್ ಅವರಿಗೆ ಕೊರೊನಾ ಲಕ್ಷಣ ಕಂಡುಬಂದಿದ್ದರಿಂದ ಅವರ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಹಾಗೂ ಕೆಲವು ಸಭೆಗಳನ್ನು ಮುಂದೂಡಲಾಗಿತ್ತು. ಕೇಜ್ರಿವಾಲ್ ಜ್ವರದಿಂದ ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ
ಕೇಜ್ರಿವಾಲ್ಗೆ ಮಧುಮೇಹ ಕಾಯಿಲೆ ಇರುವುದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.