ಚಿಕ್ಕಬಳ್ಳಾಪುರ, ಜೂ 10 (DaijiworldNews/PY) : ನಿಜವಾದ ಕೊರೊನಾ ಸ್ಪೈಕ್ ಜುಲೈಯಲ್ಲಿ ಬರಬಹುದು ಎಂದು ಪರಿಣತರು ಹೇಳಿದ್ದಾರೆ. ನಾವು ಅದಕ್ಕೆ ಬೇಕಾದ ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಹರಡುವ ಮುನ್ಸೂಚನೆ ಇದೆ. ಸಾರ್ವಜನಿಕರು ಸಹಕಾರ ನೀಡಿದರೆ ಕರ್ನಾಟಕದಲ್ಲಿ ಸ್ಪೈಕ್ ಆಗುವುದಿಲ್ಲ. ಲಾಕ್ಡೌನ್ ಮುಕ್ತ ಆದ ಕ್ಷಣ ಕೊರೊನಾ ಮುಕ್ತ ಆಗುವುದಿಲ್ಲ ಎಂದು ತಿಳಿಸಿದರು.
ವಿದೇಶಗಳಲ್ಲಿ ಒಂದೆರಡು ತಿಂಗಳುಗಳಲ್ಲೇ ಸ್ಪೈಕ್ ಬಂದಿತ್ತು. 5 ತಿಂಗಳು ಆದರೂ ನಮ್ಮ ದೇಶದಲ್ಲಿ ಸ್ಪೈಕ್ ಆಗಿಲ್ಲ. ನಮ್ಮ ಸರ್ಕಾರಗಳು ಕೈಗೊಂಡಿರುವ ತೀರ್ಮಾನಗಳಿಂದ ಕೊರೊನಾ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿ 70 ಕ್ಕೂ ಅಧಿಕ ಲ್ಯಾಬ್ಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ನಾಲ್ಕು ಲಕ್ಷ ಕೊರೊನಾ ಟೆಸ್ಟ್ಗಳನ್ನು ಮಾಡಿದ್ದೇವೆ ಎಂದರು.