ನವದೆಹಲಿ, ಜೂ 10 (DaijiworldNews/PY) : ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, ಉಭಯ ಇಂಧನಗಳ ದರವನ್ನು ಬುಧವಾರ ಪ್ರತಿ ಲೀಟರ್ಗೆ 40 ಪೈಸೆ ಏರಿಕೆ ಮಾಡಲಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಮಂಗಳವಾರದಂದು ಕ್ರಮವಾಗಿ ಲೀಟರ್ಗೆ 54 ಹಾಗೂ 58 ಪೈಸೆ ಹೆಚ್ಚಿಸಲಾಗಿತ್ತು.
ಇಂಧನ ದರದ ಪ್ರತಿ ದಿನ ಪರಿಷ್ಕರಣೆಯನ್ನು ಮಾರ್ಚ್ ತಿಂಗಳಿನ ಮಧ್ಯಭಾಗದಿಂದ ಸ್ಥಗಿತಗೊಳಿಸಲಾಗಿತ್ತು. ಆದ್ದರಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಳಿಕೆ ಆಗುತ್ತಿರಲಿಲ್ಲ. ತೈಲ ಕಂಪೆನಿಗಳು ಭಾನುವಾರದಿಂದ ದರ ಪರಷ್ಕರಣೆಯನ್ನು ಪುನಃ ಪ್ರಾರಂಭ ಮಾಡಿವೆ.