ತಿರುವನಂತಪುರ,ಜೂ 10 (Daijiworld News/MSP):: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್ ಅವರ ವಿವಾಹ ನಿಶ್ಚಯವಾಗಿದೆ ಎಂದು ಕೇರಳದ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಸಿಪಿಐಎಂ ಯುವ ಘಟಕ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಸ್ ಅವರೊಂದಿಗೆ ವೀಣಾ ಥಯಿಕ್ಕಂಡಿಯಿಲ್ ಅವರ ವಿವಾಹ ನಡೆಯಲಿದೆ.
ವೀಣಾ ಹಾಗೂ ಮುಹಮ್ಮದ್ ರಿಯಾಸ್ ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ. ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ವೀಣಾ ಅವರು ಪತಿಯಿಂದ ದೂರವಾಗಿದ್ದಾರೆ. ಇವರಿಗೆ 5 ವರ್ಷದ ಒಬ್ಬ ಮಗನಿದ್ದಾನೆ. ರಿಯಾಸ್ ಕೂಡ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಇವರಿಗೂ ಇಬ್ಬರು ಪುತ್ರರಿದ್ದಾರೆ.
ಜೂನ್ 15 ರಂದು ಇವರ ವಿವಾಹ ಮಹೋತ್ಸವ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರಿಯಾಸ್ ಅವರು 2009 ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.