ಹೈದರಾಬಾದ್, ಜೂ.10 (DaijiworldNews/MB) : ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ನಕಲಿ ದಾಖಲೆಗಳ ಮೂಲಕ ಆಧಾರ್, ಪಾಸ್ಪೋರ್ಟ್ ಸಂಗ್ರಹ ಮಾಡಿದ ಆರೋಪದಲ್ಲಿ ತೆಲಂಗಾಣದ ಝಹೀರಾಬಾದ್ನಲ್ಲಿ ಮೂವರು ಮಹಿಳೆಯರು ಸೇರಿದಂತೆ ಐವರು ರೊಹಿಂಗ್ಯ ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಬಾಂಗ್ಲಾ ನಿವಾಸಿಗಳ ಕುರಿತಾಗಿ ಖಚಿತ ಮಾಹಿತಿ ಪಡೆದ ಮೇರೆಗೆ ಝಹೀರಾಬಾದ್ ಪೊಲೀಸ್ ಇನ್ಸ್ ಪೆಕ್ಚರ್ ಸೈದೇಶ್ವರ್ ಅವರು ಕಾರ್ಯಾಚರಣೆ ನಡೆಸಿದ್ದು ಈ ಸಂದರ್ಭದಲ್ಲಿ ಈ ಐವರನ್ನು ಬಂಧಿಸಿ ವಿಚಾರಣಗೆ ಮಾಡಿದಾಗ ಅವರೆಲ್ಲರೂ ರೊಹಿಂಗ್ಯಾ ಮುಸ್ಲಿಮರು ಎಂದು ತಿಳಿದು ಬಂದಿದೆ.
ಅವರ ದಾಖಲೆ ಪರಿಶೀಲನೆ ನಡೆಸಿದಾಗ ನಕಲಿ ಮಾಹಿತಿ ನೀಡಿ ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಪಡೆದಿದ್ದಾರೆ ಎಂದು ತಿಳಿದು ಬಂದ ಹಿನ್ನಲೆಯಲ್ಲಿ ಅವರ ಬಂಧನ ಮಾಡಿ ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಸೇರಿದಂತೆ ಇತರ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.