ನವದೆಹಲಿ, ಜೂ 10 (Daijiworld News/MSP): ಪಾಕ್ ತನ್ನ ನರಿ ಬುದ್ದಿ ಬಿಡುವಂತೆ ಕಾಣಿಸುತ್ತಿಲ್ಲ. ಕೊರೊನಾ ಹುಟ್ತುಹಾಕಿರುವ ಸಂದಿಗ್ದತೆ ಪಾಕಿಸ್ತಾನವನ್ನು ಕಟ್ಟಿಹಾಕುವಂತೆ ಮಾಡಿದ್ದು, ಒಂದೆಡೆ ಭಾರತದೊಳಗೆ ತನ್ನ ಗೂಢಚಾರಿಗಳನ್ನು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಕೈ ಕೈ ಹಿಚುಕಿಗೊಳ್ಳುತ್ತಿದೆ. ಈ ನಡುವೆ ಪಾಕ್ ನಕಲಿ ಆರೋಗ್ಯ ಸೇತು ಆಪ್ ಸೃಷ್ಟಿಸಿ ಮತ್ತೆ ತನ್ನ ಕುತಂತ್ರಿ ಬುದ್ದಿ ಪ್ರದರ್ಶಿಸಲು ಹೊರಟಿದೆ.
ಭಾರತದ ಆರೋಗ್ಯ ಸೇತು ಆಯಪ್ನ ಜನಪ್ರಿಯತೆ ನೋಡಿ ಕುಗ್ಗಿ ಹೋಗಿರುವ ಪಾಕಿಸ್ತಾನ ತನ್ನ ನೀಚ ಬುದ್ಧಿ ತೋರಿಸಿ ನಕಲಿ 'ಆರೋಗ್ಯಸೇತು ಆಯಪ್ ಬಿಡುಗಡೆ ಮಾಡಿದೆ. ಭಾರತದಲ್ಲಿ 10 ಕೋಟಿಗೂ ಅಧಿಕ ಡೌನ್ಲೋಡ್ ಕಂಡಿರುವ, ವಿಶ್ವದ ಟಾಪ್ ಎಂಟು ಆಯಪ್ಗಳ ಪಟ್ಟಿಯಲ್ಲಿರುವ ಆರೋಗ್ಯಸೇತುವಿನ ನಕಲಿ ಆವೃತ್ತಿಯನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.
ಈ ಮೂಲಕ ಪಾಕಿಸ್ತಾನದ ಹ್ಯಾಕರ್ಗಳು ಭಾರತೀಯ ಪ್ರಜೆಗಳ ಹಾಗೂ ಸೇನೆಯ ಮಾಹಿತಿ ಕದಿಯಲು ಮುಂದಾಗಿದ್ದಾರೆ ಎಂದು ಮಹಾರಾಷ್ಟ್ರದ ಸೈಬರ್ ಇಲಾಖೆಯ ಐಜಿ ಯಶಸ್ವಿ ಯಾದವ್ ಎಚ್ಚರಿಸಿದ್ದಾರೆ. ಮೊಬೈಲ್ ಗಳಿಗೆ ಡೌನ್ ಲೋಡ್ ಲಿಂಕ್ ಕಳುಹಿಸಿಇ ಈ ನಕಲಿ ಆಪ್ ನ್ನು ಅಳವಡಿಸಲು ಪಾಕ್ ಗುಪ್ತಚರ ಸಂಸ್ಥೆ ಐ ಎಸ್ ಐ ಯತ್ನಿಸುತ್ತಿದೆ.
ಹೀಗಾಗಿ ಆರೋಗ್ಯ ಸೇತು ಆಪ್ ನ್ನು ಪ್ಲೇ ಸ್ಟೋರ್ ಮೂಲಕ ಮಾತ್ರ ಡೌನ್ ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಆರೋಗ್ಯ ಸೇತು ಹೆಸರಿನಲ್ಲಿ ಬರೋ ಯಾವುದೇ ಲಿಂಕ್ ಕ್ಲಿಕ್ಲಿಸದೇ ಇರುವುದು ಉತ್ತಮ. ಹಾಗೂ ಆರೋಗ್ಯ ಸೇತುವು ಎಕ್ಸ್ ಟೆನ್ಷನ್ ಪೈಲ್ ಹೆಸರು gov.in ಎನ್ನುವುದನ್ನು ಬಳಕೆದಾರರು ನೆನಪಿಟ್ಟುಕೊಳ್ಳಬೇಕು