ನವದೆಹಲಿ, ಜೂ.10 (DaijiworldNews/MB) : ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 15 ದಿನಗಳಲ್ಲಿ ಉಗ್ರ ಸಂಘಟನೆಗಳ 8 ಮಂದಿ ಉನ್ನತ ಕಮಾಂಡರ್ಗಳು ಸೇರಿದಂತೆ 22 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಮೇ 25ರಂದು ಕುಲ್ಗಾಂನಲ್ಲಿ ಇಸ್ಲಾಮಿಕ್ ಸ್ಟೇಟ್ನ ಜಮ್ಮು ಮತ್ತು ಕಾಶ್ಮೀರದ ಕಮಾಂಡರ್ ಆದಿಲ್ ಆಹ್ಮದ್ ವಾನಿ, ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉಗ್ರ ಶಹೀನ್ ಅಹಮ್ಮದ್ ಥೋಕರ್ರನ್ನು, ಮೇ 30 ರಂದು ಕುಲ್ಗಾಂನ ವಾನ್ಪೊರಾದಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಪರ್ವೇಜ್ ಅಹಮದ್ ಪಂಡಿತ್ ಹಾಗೂ ಜೈಷ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಶಕೀಲ್ ಅಹಮದ್, ಜೂನ್ 2ರಂದು ಅವಂತಿಪೊರಾದಲ್ಲಿ ಜೈಷ್-ಎ-ಮೊಹಮ್ಮದ್ ಗ್ರೂಪ್ ಕಮಾಂಡರ್ ಅಖೀಬ್ ರಂಜಾನ್ ವಾನಿ, ಅವಂತಿಪೊರಾದ ಸೈಮೂ ತ್ರಾಲ್ನಲ್ಲಿ ಜೆಇಎಂ ಕಮಾಂಡರ್ ಮೊಹಮ್ಮದ್ ಮಕ್ಬೂಲ್ ಛೋಪನ್ನನ್ನು, ಜೂನ್ 3ರಂದು ಪುಲ್ವಾಮಾದ ಕಾಂಗನ್ನಲ್ಲಿ ಜೆಇಎಂನ ಉನ್ನತ ಕಮಾಂಡರ್, ಪಾಕಿಸ್ತಾನದ ನಿವಾಸಿ ಫೌಜಿ ಭಾಯಿ, ಹಿಜ್ಬುಲ್ ಮುಜಾಹಿದೀನ್ ಉನ್ನತ ಕಮಾಂಡರ್ ಮಂಝೂರ್ ಅಹ್ಮದ್ ಕರ್, ಜೆಇಎಂ ಉನ್ನತ ಕಮಾಂಡರ್ ಜಾವೇದ್ ಅಹ್ಮದ್ ಝಾರ್ಗರ್ನನ್ನು , ಜೂನ್ 7ರಂದು ರೆಬಾನ್ನ ಶೋಪಿಯಾನ್ನಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಇಶ್ಪಾಖ್ ಅಹ್ಮದ್ ಇಟೂ ಹಾಗೂ ಜೆಇಎಂ ಕಮಾಂಡರ್ ಒವೈಸ್ ಅಹ್ಮದ್ ಮಲಿಕ್ನನ್ನು, ಶೋಪಿಯಾನ್ನ ರೆಬಾನ್ನಲ್ಲಿ ಜೂನ್ 7ರಂದು ಹಿಜ್ಬುಲ್ ಮುಜಾಹಿದೀನ್ನ ಕಮಾಂಡರ್ ಉಮರ್ ಮೊಹಿಯುದ್ದೀನ್ ಧೋಬಿ, ಎಲ್ಇಟಿ ಕಮಾಂಡರ್ ರಯೀಸ್ ಅಹ್ಮದ್ ಖಾನ್, ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ಗಳಾದ ಸಕ್ಲೇನ್ ಅಹ್ಮದ್ ವೇಗೆ ಹಾಗೂ ವಕೀಲ್ ಅಹ್ಮದ್ ನೈಕೂನನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ.
ಇನ್ನೂ ಈ ಕಾರ್ಯಚರಣೆಯನ್ನು ಭಾರತೀಯ ಯೋಧರಿಗೆ ಯಾವುದೇ ಹಾನಿಯಾಗದಂತೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದೆ.