ಬೆಂಗಳೂರು, ಜೂ.10 (DaijiworldNews/MB) : ನಾಲ್ಕು ದಿನದಲ್ಲಿ ಸುಮಾರು 2 ರೂ. ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯನ್ನು ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರವು ಕೇವಲ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸುಮಾರು 2 ರೂ. ಹೆಚ್ಚಿಸಿದೆ. ಕಚ್ಚಾ ತೈಲ ದರ ಏರಿಕೆಯಾದ ಕೂಡಲೇ ಅದರ ಹೊರೆಯನ್ನು ಜನ ಸಾಮಾನ್ಯರ ಮೇಲೆ ವೇಗವಾಗಿ ಹಾಕುವ ಪ್ರಧಾನಿ ಮೋದಿ ಕಚ್ಚಾ ಬೆಲೆ ಕಡಿಮೆಯಾದಾಗ ಬೆಲೆ ಕಡಿತಗೊಳಿಸುವ ಬಗ್ಗೆ ಜಡತನ ವಹಿಸಿರುತ್ತಾರೆ. ತೈಲ ಬೆಲೆ ಏರಿಕೆಯಾಗುವಾಗ, ಬೇಡಿಕೆ ಹೆಚ್ಚಳವನ್ನು ನಿರೀಕ್ಷೆ ಮಾಡುವುದು ಹೇಗೆ? ಎಂದು ಟೀಕೆ ಮಾಡಿದ್ದಾರೆ.