ಬೆಂಗಳೂರು, ಜೂ 10 (Daijiworld News/MSP): ಕೆಪಿಸಿಸಿ ಅಧ್ಯಕ್ಷ ರಾದ ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಭಾರತಕ್ಕೆ ಹಾಗೂ ರಾಜ್ಯಕ್ಕೆ ಬಹಳ ಮುಖ್ಯ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಡಿ.ಕೆ.ಶಿ ಪದಗ್ರಹಣಕ್ಕೆ ಸರ್ಕಾರ ಎಂದೂ ಅಡ್ಡಿಯಾಗಿಲ್ಲ. ಆದರೆ ಕಾಂಗ್ರೆಸ್ಸಿಗರು ಸುಖಾಸುಮ್ಮನೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡ್ತಾ ಇದ್ದಾರೆ . ಮೊದಲೇ ಸರ್ಕಾರ ಮತ್ತು ಅವರಿಗೆ ಎಣ್ಣೆ ಸಿಗೇಕಾಯಿ ಇದ್ದ ಸಂಬಂಧ ಎಂದು ಹೇಳಿದ್ದಾರೆ.
ಕೇಂದ್ರದ ಮಾರ್ಗಸೂಚಿ ಪ್ರಕಾರ ವಿವಾಹಕ್ಕೆ ೫೦ ಜನ ಹಾಗೂ ಅಂತ್ಯಸಂಸ್ಕಾರಕ್ಕೆ 20 ಜನ ಸೇರಲು ಅವಕಾಶವಿದೆ. ರಾಜಕೀಯ ಕಾರ್ಯಕ್ರಮ ಕ್ರಮ ಹಮ್ಮಿಕೊಳ್ಳಲು ಕೇಂದ್ರದ ಮಾರ್ಗ ಸೂಚಿ ಅವಕಾಶ ಕಲ್ಪಿಸಿದ್ದ. ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಬೇಕಾದರೆ ನಿಯಮಗಳನ್ನು ಬದಲಾವಣೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಜೂ.೧೪ ರಂದು ಡಿಕೆ ಶಿವಕುಮಾರ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಬೇಕಾಗಿತ್ತು. ಲಾಕ್ ಡೌನ್ ಕಾರಣಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ.