ಶ್ರೀನಗರ, ಜೂ.10 (DaijiworldNews/MB) : ಕಳೆದ ಎರಡು ವಾರದಿಂದ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಉಗ್ರರನ್ನು ಹೊಡೆದುರುಳಿಸುತ್ತಿದ್ದು ಬುಧವಾರ ಮತ್ತೆ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸುಗೂ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನಾಪಡೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಐವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಕಳೆದ 72 ಗಂಟೆಗಳ ಅವಧಿಯಲ್ಲಿ ಇದು ಮೂರನೇ ಭಾರೀ ನಡೆದ ಕಾರ್ಯಾಚರಣೆ ಮಾಡಲಾಗಿದೆ.
ಸೋಮವಾರ ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದ್ದಿನ್ಗೆ ಸೇರಿದ ನಾಲ್ವರು ಉಗ್ರರನ್ನು ಹಾಗೂ ಭಾನುವಾರ ಐವರು ಉಗ್ರರನ್ನು ರೆಬಾನ್ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆ ಹೊಡೆದುರುಳಿಸಿತ್ತು.
ಕಳೆದ ಎರಡು ವಾರದಲ್ಲಿ ಒಟ್ಟು 9 ಆಪರೇಶನ್ಗಳಾಗಿದ್ದು, 22 ಉಗ್ರರನ್ನು ಹತ್ಯೆ ಮಾಡಲಾಗಿದೆ.