ಬೆಂಗಳೂರು, ಜೂ 10 (DaijiworldNews/SM): ಹೊರರಾಜ್ಯಗಳಿಂದ ಆಗಮಿಸುವವರಿಗೆ ಕ್ವಾರಂಟೈನ್ ಸೇರಿದ್ದಂತೆ ಕಡ್ಡಾಯವಾಗಿ ಪಾಲಿಸಲೇಬೇಕಾದ ಕೆಲವು ನಿಯಮಗಳನ್ನು ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಮೂಲಕ ಹೊರಡಿಸಿದೆ. ಮಹಾರಾಷ್ಟ್ರದಿಂದ ಆಗಮಿಸುವವರು ಸೇರಿದಂತೆ ಇತರ ರಾಜ್ಯಗಳಿಂದ ಆಗಮಿಸುವವರಿಗೆ ಇರುವ ಕ್ವಾರಂಟೈನ್ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಹೊಸ ಮಾರ್ಗ ಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು ಪಾಲಿಸಲೇ ಬೇಕಾದ ಕಡ್ಡಾಯ ನಿಯಮಗಳು:
ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಕಡ್ಡಾಯ
ಆಗಮನ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಕಡ್ಡಾಯ
ಕ್ವಾರಂಟೈನ್ ನಿಯಮ ಪಾಲನೆ ಅಗತ್ಯ
ಕ್ವಾರಂಟೈನ್ ನಿಯಮಾವಳಿಗಳು:
ಹೊರ ರಾಜ್ಯದಿಂದ ಆಗಮಿಸಿದವರಲ್ಲಿ ರೋಗ ಲಕ್ಷಣಗಳಿದ್ದಲ್ಲಿ ಈ ಕೆಲಗಿನ ಮಾರ್ಗಸೂಚಿ ಪಾಲಿಸುವುದು ಅನಿವಾರ್ಯ ಎಂದು ರಾಜ್ಯ ಸರಕಾರ ಹೇಳಿದೆ.
ಕೋವಿಡ್ ನಿಗಾ ಕೇಂದ್ರ, ನಿಗದಿತ ಕೋವಿಡ್ ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕವಾಗಿರಿಸುವುದು
ಆಗಮಿಸಿದ ತಕ್ಷಣ ಕೋವಿಡ್-19 ಪರೀಕ್ಷೆ ನಡೆಸುವುದು
ಪಾಸಿಟಿವ್ ಬಂದಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸುವುದು
ನೆಗೆಟಿವ್ ಬಂದಲ್ಲಿ ಮತ್ತೆ ಪರೀಕ್ಷೆಗೆ ಒಳಪಡಿಸುವುದು
ಆಗಮಿಸಿದ ಬಳಿಕ ನೆಗೆಟಿವ್ ಬಂದವರಿಗೆ 14 ದಿನ ಹೋಂ ಕ್ವಾರಂಟೈನ್
ಆಗಮನದ ಸಂದರ್ಭ ರೋಗ ಲಕ್ಷಣಗಳಿಲ್ಲದಿದ್ದಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳು ಇಂತಿವೆ:
ಮಹಾರಾಷ್ಟ್ರದಿಂದ ಆಗಮಿಸುವವರಿಗೆ :
7 ದಿನಗಳ ಸಾಂಸ್ಥಿಕ ಕ್ವಾರಂಟೈನ್
ಬಳಿಕ 7 ದಿನಗಳ ಹೋಂ ಕ್ವಾರಂಟೈನ್
ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣಗಳಿದ್ದಲ್ಲಿ ಪರೀಕ್ಷೆ
60 ವರ್ಷ ಮೇಲ್ಪಟ್ಟವರು, ಇತರ ರೋಗದಿಂದ ಬಳಲುತ್ತಿರುವವರು ಕೊರೊನಾ ಪರೀಕ್ಷೆ ನಡೆಸಬೇಕು
ವೃದ್ದರು, ಗರ್ಭಿಣಿಯರು, ಮಕ್ಕಳು, ಅನಾರೋಗ್ಯದಲ್ಲಿರುವವರಿಗೆ 14 ದಿನ ಹೋಂ ಕ್ವಾರಂಟೈನ್
ಅವರಿಗೆ ಬಂದ ತಕ್ಷಣವೇ ಕೊರೊನಾ ಪರೀಕ್ಷೆ
ಇತರ ರಾಜ್ಯಗಳಿಂದ ಆಗಮಿಸುವವರು ಪಾಲಿಸಲೇಬೇಕಾದ ನಿಯಮಾವಳಿಗಳು:
14 ದಿನಗಳ ಕಡ್ಡಾಯ ಹೋಂ ಕ್ವಾರಂಟೈನ್
ಈ ಅವಧಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆ
ಹೋಂ ಕ್ವಾರಂಟೈನ್ ಗೆ ಪ್ರತ್ಯೇಕ ಕೊಠಡಿ ಇಲ್ಲದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್