ರಾಮನಗರ, ಜೂ.11 (DaijiworldNews/MB) : ನಾವು ಗೆದ್ದಾಗ ನಮ್ಮ ತಲೆತಿರುಗಿಲ್ಲ, ಸೋತಾಗ ಕುಗ್ಗಿಲ್ಲ, ನಮ್ಮದು ಜನರಿಗಾಗಿಯೇ ಇರುವ ಕುಟುಂಬ ಎಂದು ಜೆಡಿಎಸ್ ಶಾಸಕಾಂಗ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ಹೆಚ್.ಡಿ.ದೇವೇಗೌಡರು ಲೋಕಸಭೆಯಲ್ಲಿ ವಿದಾಯ ಹೇಳಿದ್ದು ನನ್ನ ಕೊನೆಯ ಭಾಷಣ ಇದು ಎಂದು ಹೇಳಿದ್ದರು. ಪುನಃ ಜನರ ಒತ್ತಾಯದ ಮೇರೆಗೆ ತುಮಕೂರಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಆದರೆ ಜನರೇ ಅವರನ್ನು ಅಲ್ಲಿ ಸೋಲಿಸಿದರು. ಈಗ ಅವರ ಅನುಭವದ ದೃಷ್ಟಿಯಿಂದ ರಾಜ್ಯಸಭೆಗೆ ಹೋಗುತ್ತಿದ್ದು ಅವರು ರಾಜ್ಯಸಭೆ ಚುನಾವಣೆಗೆ ಪ್ರವೇಶ ದೇವರ ಇಚ್ಛೆ ಎಂದಿದ್ದಾರೆ.
ಹಾಗೆಯೇ ರಾಜ್ಯದ ಸಮಸ್ಯೆ ಪ್ರಧಾನಿಗೆ ತಿಳಿಸಲು ಗಟ್ಟಿ ಧ್ವನಿ ಬೇಕಾಗಿದೆ. ಈ ಕಾರಣದಿಂದಾಗಿ ದೇವೇಗೌಡರು ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದರು.