ತಮಿಳುನಾಡು, ಜೂ 11 (Daijiworld News/MSP): ಆರು ವರ್ಷದ ಬಾಲಕ ತಿಂಡಿ ಎಂದು ಯೋಚಿಸಿ ಸ್ಥಳೀಯವಾಗಿ ನಿರ್ಮಿಸಿದ ಸ್ಫೋಟಕವನ್ನು ಕಚ್ಚಿದ ಪರಿಣಾಮ ಅದು ಸ್ಪೋಟಗೊಂಡು ಬಾಲಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿ ಬಳಿಯ ಅಲಗರೈ ಗ್ರಾಮದಲ್ಲಿ ವರದಿಯಾಗಿದೆ.
ಬಾಲಕ ತಂದೆಯ ಮೂವರು ಸ್ನೇಹಿತರು ಕಾವೇರಿ ಬ್ಯಾಂಕುಗಳ ಬಳಿ ಮೀನುಗಾರಿಕೆಗೆ ಬಳಸಲೆಂದು ಸ್ಥಳೀಯವಾಗಿ ನಿರ್ಮಿತ ಸ್ಫೋಟಕಗಳನ್ನು ಖರೀದಿಸಿದ್ದರು. ಈ ಪೈಕಿ ಎರಡು ಜೆಲಾಟಿನ್ ಸ್ಫೋಟಕ ತುಂಡುಗಳನ್ನು ಬಳಸಿ ಬಳಕೆಯಾಗದ ಸ್ಪೋಟಕವನ್ನು ಬಾಲಕನ ತಂದೆ, ಸ್ನೇಹಿತ ಭೂಪತಿಯ ಮನೆಗೆ ತಂದಿಟ್ಟಿದ್ದರು.
ಈ ವೇಳೆ ಮನೆಯಲ್ಲಿ ಆಡುತ್ತಿದ್ದ ಭೂಪತಿಯ ಮಗ, ಸ್ಫೋಟಕಗಳು ತಿಂಡಿ ಎಂದು ಭಾವಿಸಿ ಕಚ್ಚಿದ್ದಾನೆ, ಈ ಸಂದರ್ಭದಲ್ಲಿ ಸ್ಪೋಟಗೊಂಡು ಮಗುವಿನ ಬಾಯಿಗೆ ಗಂಭೀರ ಗಾಯಗೊಂಡಿತ್ತು, ವೈದ್ಯಕೀಯ ಚಿಕಿತ್ಸೆಗೆ ಕೊಂಡೊಯ್ಯುವ ಮೊದಲೇ ಮಗು ಸಾವನ್ನಪ್ಪಿತ್ತು ಎಂದು ತಿಳಿದು ಬಂದಿದೆ.
ಆ ಬಳಿಕ ಘಟನೆಯ ಪರಿಣಾಮ ಅರಿತು, ಪೊಲೀಸರಿಗೆ ತಿಳಿಸುವ ಬದಲು ಕಠಿಣ ಕ್ರಮ ಎದುರಿಸಬೇಕಾಗಿ ಬರಬಹುದು ಎಂದು ಹೆದರಿ ಭೂಪತಿ ಮತ್ತು ಅವನ ಸ್ನೇಹಿತರು ಅಂದೇ ರಾತ್ರಿ ಬಾಲಕನ ಅಂತಿಮ ವಿಧಿಗಳನ್ನು ನಡೆಸಿದ್ದಾರೆ.
ಬಾಲಕನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕುತ್ತಿದ್ದಂತೆ, ಮಗುವಿನ ಸಾವಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ.