ಬೆಂಗಳೂರು, ಜೂ 11 (DaijiworldNews/PY) : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,996 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 357 ಮಂದಿ ಮೃತಪಟ್ಟಿದ್ದಾರೆ.
ಪ್ರಸ್ತುತ ದೇಶದಲ್ಲಿ ಒಟ್ಟು 2,86,579 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1,37,448 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,41,029 ಮಂದಿ ಗುಣಮುಖರಾಗಿದ್ದು, 8,102 ಮಂದಿ ಸಾವನ್ನಪ್ಪಿರುವುದಾಗಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ.
ದೇಶದಲ್ಲಿ ಜೂನ್ 11 ರ ಬೆಳಿಗ್ಗೆ 9ರವರೆಗೈ ಒಟ್ಟು 52,13,140 ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1,51,808 ಮಾದರಿಗಳ ಪರೀಕ್ಷೆ ನಡೆಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಈವರೆಗೆ ಕರ್ನಾಟಕದಲ್ಲಿ ಒಟ್ಟು 6,041 ಕೊರೊನಾ ಪ್ರಕರಣಗಳೂ ವರದಿಯಾಗಿದ್ದು, 69 ಮಂದಿ ಸಾವನ್ನಪ್ಪಿದ್ದಾರೆ. 3,110 ಸಕ್ರಿಯ ಪ್ರಕರಣಗಳಿದ್ದು, 2,862 ಜನರು ಗುಣಮುಖರಾಗಿದ್ದಾರೆ.
ತಮಿಳುನಾಡಿನಲ್ಲಿ 36,841 ಮಂದಿಗೆ ಸೋಂಕು ತಗುಲಿದ್ದು, 17,182 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 326 ಮಂದಿ ಮೃತಪಟ್ಟಿದ್ದು, 19,333 ಜನ ಗುಣಮುಖರಾಗಿದ್ದಾರೆ. ಗುಜರಾತ್ನಲ್ಲಿ 21,521 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ಸದ್ಯ 5,439 ಸಕ್ರಿಯ ಪ್ರಕರಣಗಳಿವೆ. 14,735 ಮಂದಿ ಗುಣಮುಖರಾಗಿದ್ದು, 1,347 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 19,581ಸಕ್ರಿಯ ಪ್ರಕರಣಗಳಿದ್ದು, 32,810ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ 984 ಮಂದಿ ಸಾವನ್ನಪ್ಪಿದ್ದು, 12,245 ಮಂದಿ ಗುಣಮುಖರಾಗಿದ್ದಾರೆ.
ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 94,041 ಪ್ರಕರಣಗಳು ವರದಿಯಾಗಿದ್ದು, 3,438 ಮಂದಿ ಸಾವನ್ನಪ್ಪಿದ್ದಾರೆ. 46,086 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, 44,517 ಮಂದಿ ಗುಣಮುಖರಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ 321, ಮಧ್ಯಪ್ರದೇಶದಲ್ಲಿ 427 ಹಾಗೂ ಪಶ್ಚಿಮ ಬಂಗಾಳದಲ್ಲಿ 432 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.