ಮೈಸೂರು, ಜೂ 11 (DaijiworldNews/PY) : ಇದೀಗ ಸರ್ಕಾರ 5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದು ಮಾಡಿದೆ. ಇದು ಸರಿಯಾದ ಕ್ರಮವಲ್ಲ. ನನ್ನ ಪ್ರಕಾರ ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಆನ್ ಲೈನ್ ಶಿಕ್ಷಣ ಪದ್ದತಿಗೆ ನಾನು ಮೊದಲಿನಿಂದಲೂ ವಿರೋಧ ಮಾಡುತ್ತಿದ್ದೇನೆ. ಇದೀಗ ಸರ್ಕಾರ 5ನೇ ತರಗತಿಯವರೆಗೆ ಆನ್ ಲೈನ್ ಶಿಕ್ಷಣ ರದ್ದು ಮಾಡಿದೆ. ಇದು ಸರಿಯಾದ ಕ್ರಮವಲ್ಲ. ನನ್ನ ಪ್ರಕಾರ ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದು ಆಗಬೇಕು ಎಂದು ತಿಳಿಸಿದರು.
ತರಗತಿಯಲ್ಲೇ ಮಕ್ಕಳಿಗೆ ನೇರವಾಗಿ ಬೋಧನೆ ಮಾಡಬೇಕು. ಆದ್ದರಿಂದ, ಅಕ್ಟೋಬರ್ವರೆಗೆ ಶಾಲೆ ತೆರೆಯಬಾರದು. ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಈ ವಿಚಾರವನ್ನು ನಿರ್ಧಾರ ಮಾಡಬೇಕು ಎಂದರು.