ಕಾಶ್ಮೀರ, ಜೂ 11 (Daijiworld News/MSP): ಉತ್ತರ ಕಾಶ್ಮೀರದ ಗಡಿ ಜಿಲ್ಲೆಯಾದ ಕುಪ್ವಾರಾದಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಜಾಲವನ್ನು ಪತ್ತೆ ಮಾಡಿ, ಅವರಿಂದ ಬಾರೀ ಪ್ರಮಾಣದ ಅಫೀಮು ಮತ್ತು ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಂಡಿವೆ.
"ಬಂಧಿತ ವ್ಯಕ್ತಿಗಳು ತಮ್ಮ ಪಾಕಿಸ್ತಾನ ಹ್ಯಾಂಡ್ಲರ್ ಗಳೊಂದಿಗೆ ಸಂಪರ್ಕದಲ್ಲಿದ್ದರು. ಬಂಧಿತರಿಂದ 21 ಕೆಜಿ ಹೆರಾಯಿನ್, 1.34 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿ ವಶದಿಂದ ವಶಪಡಿಸಿಕೊಳ್ಳಲಾಗಿದೆ" ಎಂದು ಎಸ್ಪಿ ಹಂದವಾರ ಡಾ ಜಿ.ವಿ ಸುಂದೀಪ್ ಚಕ್ರವರ್ತಿ ತಿಳಿಸಿದ್ದಾರೆ.
ಬಂದಿತರನ್ನು ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರ, ಮುಖ್ಯ ಆರೋಪಿ ಇಫ್ತಿಖರ್ ಇಂದ್ರಬಿ ಈತನ ವಿರುದ್ಧ ಹಲವಾರು ಎಫ್ಐಆರ್ ದಾಖಲಾಗಿದೆ, ಈತನ ಅಳಿಯ ಮೊಮಿನ್ ಪೀರ್ ಮತ್ತು ಮೂರನೆಯವನು ಇಕ್ಬಾಲ್-ಉಲ್-ಇಸ್ಲಾಂ ಎಂದು ಗುರುತಿಸಲಾಗಿದೆ.
ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ನ ವಿಶೇಷ ತಂಡ ಮತ್ತು ಸಿಆರ್ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಕಣಿವೆಯಲ್ಲಿ ಮಾದಕ ವಸ್ತು ಪೂರೈಕೆ ಮತ್ತು ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದ ಈ ಮೂವರು ಎಲ್ಇಟಿ ಉಗ್ರರನ್ನು ಬಂಧಿಸಿವೆ ಎಂದು ಅವರು ತಿಳಿಸಿದ್ದಾರೆ.
ಲಷ್ಕರ್ ಜಾಲದ ಸದಸ್ಯರು ಪಾಕಿಸ್ತಾನದಲ್ಲಿರುವ ಸಂಘಟನೆಯ ಹಿರಿಯ ಉಗ್ರರೊಂದಿಗೆ ಸಂಪರ್ಕದಲ್ಲಿದ್ದರು. ಈ ಕುರಿತಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ