ಮಧ್ಯಪ್ರದೇಶ, ಜೂ12 (DaijiworldNews/MSP): " ನಾನು ಕೊಡುವ ಕೇವಲ ಒಂದೇ ಒಂದು ಮುತ್ತಿನಿಂದ ಕೊರೊನಾ ಓಡಿಸುತ್ತೇನೆ " ಎಂದು ಹೇಳಿ ಅನೇಕ ಮಂದಿಗೆ ಕಿಸ್ ಕೊಟ್ಟಿದ್ದ ಮಧ್ಯಪ್ರದೇಶದ ಬಾಬಾ ಇದೀಗ ಅದೇ ಸೋಂಕಿಗೆ ಬಲಿಯಾಗಿದ್ದಾನೆ.
ಕೊರೊನಾ ವೈರಸ್ ಗೆ ಔಷಧಿ ಕಂಡುಹಿಡಿಯಲು ವಿಶ್ವದ ಅನೇಕ ರಾಷ್ಟ್ರಗಳು ಪ್ರಯತ್ನ ಪಡುತ್ತಿವೆ. ಆದರೆ ಈತ ಮಾತ್ರ ತಾನು ದೇವಮಾನವ ನಾನು ಕೊಡೋ ಮುತ್ತಿಗೆ ಕೊರೊನಾ ಓಡಿಸುವ ಶಕ್ತಿ ಇದೆ ಎಂದು ಜನರನ್ನು ನಂಬಿಸಿ ಅನೇಕರಿಗೆ ಕಿಸ್ ಕೊಟ್ಟಿದ್ದ.
ಮಧ್ಯಪ್ರದೇಶದ ನಾಯಪುರದ ನಿವಾಸಿಯಾಗಿದ್ದ ಈತ ತಾನೊಬ್ಬ ಪವಿತ್ರ ಮನುಷ್ಯ ಎಂದು ಬಿಂಬಿಸಿಕೊಂಡಿದ್ದ. ಈತನಿಗೆ ತನ್ನದೇ ಆದ ಅಪಾರ ಸಂಖ್ಯೆಯಲ್ಲಿ ಭಕ್ತರಿದ್ದರು. ಈತ ಸಾವಿಗೀಡಾಗುತ್ತಿದ್ದಂತೆ ಈತನ ಹಿನ್ನೆಲೆ ಹುಡುಕಿದಾಗ ಆರೋಗ್ಯ ಅಧಿಕಾರಿಗಳಿಗೆ ದಂಗುಬಡಿದೆ. ಇದೀಗ ಈತನಿಂದ ಮುತ್ತು ಪಡೆದಿರುವ 85 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 19 ಮಂದಿ ಚಿಂತಾಜನಕ ಪರಿಸ್ಥಿತಿಯಲ್ಲಿದ್ದು ಈ ಪೈಕಿ ನಾಲ್ವರು ಈಗಾಗಲೇ ಮೃತಪಟ್ಟಿದ್ದಾರೆ ಆರೋಗ್ಯ ಇಲಾಖೆ ಹೇಳಿದೆ.
ದೇವಮಾನವ ಎಂದು ಮರುಳು ಮಾಡುತ್ತಿದ್ದ ಅನೇಕ ಜನರು ಈತನಿಂದ ಮುತ್ತು ಕೊಡಿಸಿಕೊಳ್ಳಲು ಬರುತ್ತಿದ್ದರು. ಸೋಂಕಿತನಾಗಿದ್ದ ಬಾಬಾ ಕೈಗೆ ಮುತ್ತು ಕೊಟ್ಟಾಗ ಆ ಭಾಗವನ್ನು ಭಕ್ತರು ಕಣ್ಣಿಗೆ ಹಾಗೂ ಮೂಗಿಗೆ ತಗುಲಿಸಿರುವ ಕಾರಣದಿಂದ ಸೋಂಕು ಬಾಧೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.