ಬೆಂಗಳೂರು, ಜೂ 12 (DaijiworldNews/PY) : ಲೌಕ್ಡೌನ್ನಿಂದ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವ ಕಾರಣ ವೇತನಕ್ಕಾಗಿ ಮುಖ್ಯಮಂತ್ರಿ ಅವರು ವಿಶೇಷ ಅನುದಾನ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ರಾಜ್ಯ ಸರ್ಕಾರವು, ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರ ಮೇ ತಿಂಗಳ ವೇತನಕ್ಕಾಗಿ 325.01 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.
ಅನುದಾನ ಬಿಡುಗಡೆಗೆ ಆದೇಶವಾಗಿದ್ದು, ಖಜಾನೆಗೆ ಕಡತ ಹೋಗಿ ಬರಲು ಒಂದೆರಡು ದಿನ ಕಾಲವಕಾಶ ಬೇಕಾಗಲಿದೆ. ನಾಲ್ಕೂ ಸಂಸ್ಥೆಗಳ ನೌಕರರ ಖಾತೆಗೆ ಬಹುತೇಕ ವೇತನ ಜಮೆ ಆಗಲಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದರು.