ನವದೆಹಲಿ, ಜೂ 12 (DaijiworldNews/PY) : ಕೊಕಾ ಕೋಲಾ, ಥಂಬ್ಸ್ ಅಪ್ ತಂಪು ಪಾನೀಯಗಳನ್ನು ನಿಷೇಧಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ಅರ್ಜಿದಾರರಿಗೆ 5 ಲಕ್ಷ ರೂ ದಂಡ ವಿಧಿಸಿದೆ.
ಸಾಂದರ್ಭಿಕ ಚಿತ್ರ
ಆರೋಗ್ಯದ ಮೇಲೆ ಈ ತಂಪು ಪಾನೀಯಗಳು ಪ್ರತಿಕೂಲವಾದ ಪರಿಣಾಮವನ್ನು ಬೀರಲಿವೆ ಎಂದು ಅರ್ಜಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಉಮೇದ್ ಸಿನ್ಹಾ. ಪಿ ಚಾವ್ಡಾ ವಾದಿಸಿದ್ದರು. ಇದು ಸೂಕ್ತವಲ್ಲದ ಕಾರಣ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.
ಈ ಎರಡು ಬ್ರಾಂಡ್ಗಳನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿದ್ದು ಏಕೆ ಹಾಗೂ ತಮ್ಮ ಆರೋಪಕ್ಕೆ ಆಧಾರ ಏನು ಎಂದು ಸಮರ್ಥನೆ ನೀಡಲು ಅರ್ಜಿದಾರರ ಪರ ವಕೀಲರು ವಿಫರಾಗಿದ್ದಾರೆ ಎಂದು ನ್ಯಾಯಪೀಠ ಹೇಳಿತು.
ಒಂದು ತಿಂಗಳ ಅವಧಿಯಲ್ಲಿ ಸುಪ್ರೀಂ ಕೋರ್ಟ್ನ ರಿಜಿಸ್ಟ್ರಿಯಲ್ಲಿ ದಂಡದ ಮೊತ್ತವನ್ನು ಠೇವಣಿ ಇಡಬೇಕು ಹಾಗೂ ಸುಪ್ರೀಂ ಕೋರ್ಟ್ ಅಡ್ವೋಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ಗೆ ಈ ಮೊತ್ತವನ್ನು ನೀಡಬೇಕು ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಆದೇಶಿಸಿದೆ.