ನವದೆಹಲಿ: ಜೂ12 (DaijiworldNews/MSP): ಕೊನೆಗೂ ದೆಹಲಿಯ ನಿಜಾಮುದ್ದೀನ್ ಪ್ರದೇಶ ಕಂಟೈನ್ಮೆಂಟ್ ಝೋನ್ ನಿಂದ ಮುಕ್ತಿ ಪಡೆದಿದೆ. ಬರೋಬ್ಬರಿ 70 ದಿನಗಳ ಬಳಿಕ ನಿಜಾಮುದ್ದೀನ್ ಪ್ರದೇಶ ಕಂಟೈನ್ಮೆಂಟ್ ಪ್ರದೇಶವಲ್ಲ ಎಂದು ಸ್ಥಳೀಯ ಜಿಲ್ಲಾಡಳಿತ ಘೋಷಿಸಿದೆ.
ಕೊರೊನಾ ಕಾರಣದಿಂದ ದೆಹಲಿಯ ನಿಜಾಮುದ್ದೀನ್ ಪ್ರದೇಶ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ನಿಜಾಮುದ್ದೀನ್ ಪ್ರದೇಶದಲ್ಲಿ ಹಜಾರತ್ ದರ್ಗಾ ಹಾಗೂ ತಬ್ಲೀಗಿ ಜಮಾತ್ನ ಮರ್ಕಜ್ ಧಾರ್ಮಿಕ ಕಟ್ಟಡಗಳಿದ್ದು ಇಲ್ಲಿಗೆ ದೇಶ ವಿದೇಶಗಳಿಂದ ಪ್ರಾರ್ಥನೆ ಸಲ್ಲಿಸಲೆಂದು ಭಕ್ತರು ಆಗಮಿಸುತ್ತಿದ್ದರು.
ಸ್ಥಳೀಯ ಜಿಲ್ಲಾಡಳಿತ ಇದೀಗ ಜಾಮುದ್ದೀನ್ ಪ್ರದೇಶ ಕಂಟೈನ್ಮೆಂಟ್ ಝೋನ್ ಪ್ರದೇಶವಲ್ಲ ಎಂದರೂ ದರ್ಗಾ ಸೇರಿದಂತೆ ಮರ್ಕಜ್ ದ ತೆರೆಯಲು ಅವಕಾಶ ನೀಡಿಲ್ಲ. ಇಲ್ಲಿ ಭದ್ರತಾ ಸಿಬ್ಬಂದಿಗಳ ಕಾವಲು ಮುಂದುವರೆಸಲಾಗಿದ್ದು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.
ಹಜಾರತ್ ದರ್ಗಾ ಹಾಗೂ ತಬ್ಲೀಗಿ ಜಮಾತ್ನ ಮರ್ಕಜ್ ಕಟ್ಟಡದ ಸುತ್ತಮುತ್ತ ಸುಮಾರು 25 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಮಾಡುತ್ತಿವೆ. ಲಾಕ್ ಡೌನ್ ಸಡಿಲಗೊಳಿಸಿದರೂ ಕೊರೊನಾ ಸೋಂಕಿನ ಭಯದಿಂದಾಗಿ ಇನ್ನು ಜನ ಸಹಜ ಸ್ಥಿತಿಗೆ ಮರಳಲು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.