ತಮಿಳುನಾಡು, ಜೂ 13 (Daijiworld News/MSP): ಟಿಕ್ ಟಾಕ್ ವಿಡಿಯೋ ಮಾಡಲೆಂದು ಜೀವಂತ ಮೀನು ನುಂಗಲು ಹೋಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ನಡೆದಿದೆ.
ಮೃತ ಯುವಕನ್ನು ಹೊಸೂರಿನ ಪಾರ್ವತಿ ನಗರದ ನಿವಾಸಿ ವೆಟ್ರಿವೆಲ್ (22) ಎಂದು ಗುರುತಿಸಲಾಗಿದೆ. ಮೃತ ವೆಟ್ರಿವೆಲ್ ಗಾರೆ ಕೆಲಸ ಮಾಡುತ್ತಿದ್ದ, ಈತ ತನ್ನ ಇಬ್ಬರು ಸ್ನೇಹಿತರ ಜೊತೆ ಥರ್ಪೆಟ್ಟೈ ಪ್ರದೇಶದ ಕೆರೆಗೆ ಮೀನು ಹಿಡಿಯಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಟ್ರಿವೆಲ್ ಹಾಗೂ ಆತನ ಸ್ನೇಹಿತರು ಪಾನಮತ್ತರಾಗಿದ್ದರು. ಈ ಟಿಕ್ ಟಾಕ್ ವಿಡಿಯೋ ರೆಕಾರ್ಡ್ ಮಾಡಲೆಂದು ಜೀವಂತ ಮೀನು ನುಂಗಿದ್ದಾನೆ. ಆದರೆ ಮೀನು ವೆಟ್ರಿವೆಲ್ ನ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಡಲಾಗದೆ ಒದ್ದಾಡಿದ್ದಾನೆ. ಈತನ ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.