ನವದೆಹಲಿ, ಜೂ.13 (DaijiworldNews/MB) : ಕೇಂದ್ರ ಸರ್ಕಾರ ಪರೋಟಕ್ಕೆ ಶೇ 18 ರಷ್ಟು ಜಿಎಸ್ಟಿ ವಿಧಿಸಲು ಮುಂದಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಹೋಟೆಲ್ಗಳಲ್ಲಿ ಪ್ಲೇನ್ ರೊಟ್ಟಿಯನ್ನು ಅಥವಾ ಪರೋಟವನ್ನು ಮಾರಿದರೆ ಶೇ 5 ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ. ಆದರೆ, ಅದನ್ನೇ ಪ್ಯಾಕ್ ಮಾಡಿ ಪರೋಟ ಎಂದು ಮಾರಿದರೆ ಶೇ 18 ರಷ್ಟು ಜಿಎಸ್ಟಿ ಒಳಪಡುತ್ತದೆ ಎಂದು ಕೇಂದ್ರ ಜಿಎಸ್ಟಿ ಮಂಡಳಿ ಶುಕ್ರವಾರ ತೀರ್ಮಾನ ತೆಗೆದುಕೊಂಡಿದೆ.
ಈ ಬಗ್ಗೆ ಜಿಎಸ್ಟಿ ಮಂಡಳಿಯ 37 ನೇ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಸಂರಕ್ಷಿಸಲ್ಪಟ್ಟ ಅಂದರೆ ಪ್ಯಾಕಿಂಗ್ ಮಾಡಿದ ಪರೋಟಾಗಳು ರೊಟ್ಟಿಯೆಂದು ಪರಿಗಣಿಸಲಾಗದು ಅದಕ್ಕೆ ರೊಟ್ಟಿಯ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಲಾಗದು. ಅವು 18% ತೆರಿಗೆಯನ್ನು ಅದಕ್ಕೆ ವಿಧಿಸಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಹೋಟೆಲ್ಗಳಲ್ಲಿ ಸೇವಿಸುವ ಸಾಮಾನ್ಯ ಪರೋಟಾಗಳು ಶೇ 18% ರಷ್ಟು ಜಿಎಸ್ಟಿಗೆ ಒಳಪಡುವುದಿಲ್ಲ. ಆದರೆ, ಅವುಗಳನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡಿದರೇ ದುಬಾರಿ ಜಿಎಸ್ಟಿ ಒಳಪಡುತ್ತದೆ ಎನ್ನುವ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದು ಅಗ್ಗದ ಬಿಸ್ಕತ್ತುಗಳು, ಪೇಸ್ಟ್ರಿಗಳು, ಕೇಕುಗಳು ಮುಂತಾದ ಪ್ಯಾಕಿಂಗ್ ವಸ್ತುಗಳು 18% ಜಿಎಸ್ಟಿಯನ್ನು ವಿಧಿಸುತ್ತವೆ. ಪ್ಯಾಕಿಂಗ್ ಪರೋಟವೂ ಇದೇ ಸಾಲಿಗೆ ಸೇರುತ್ತದೆ ಎಂಬುದು ಕೇಂದ್ರದ ವಾದವಾಗಿದೆ.
ಪರೋಟಗಳನ್ನು ಸಂಘಟಿತ ವಲಯದಿಂದ ಮಾರಾಟ ಮಾಡಲಾಗುತ್ತದೆ ಎಂಬ ಕಾರಣಕ್ಕಾಗಿ ಪ್ಯಾಕಿಂಗ್ ಪರೋಟಾದ ಮೇಲಿನ ಜಿಎಸ್ಟಿ ದರವನ್ನು ಕಡಿಮೆ ಮಾಡಲು ಮಂಡಳಿ ಶಿಫಾರಸು ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಶೇ 18 ರಷ್ಟು ತೆರಿಗೆಯನ್ನು ಪರೋಟ ಪ್ರಿಯರು ಪಾವತಿಸಬೇಕಾಗುತ್ತದೆ.
ಪ್ಯಾಕಿಂಗ್ ಮಾಡಿದ ಪರೋಟಕ್ಕೆ ಕೇಂದ್ರ ಸರ್ಕಾರ ಶೇ 18 ರಷ್ಟು ಜಿಎಸ್ಟಿ ವಿಧಿಸುತ್ತಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದು ಬಡವರ ರೋಟಿ ಮೇಲೆ ಏಕೆ ಸರ್ಕಾರದ ಕಣ್ಣು ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಮೇಮ್ಗಳನ್ನು ಹರಿದಾಡುತ್ತಿದೆ.