ಬೆಂಗಳೂರು, ಜೂ 13 (Daijiworld News/MSP): ರಾಜ್ಯದಲ್ಲಿ ಬಿಜೆಪಿ ಸರ್ಕಾರದ ರಚನೆಯಲ್ಲಿ ಸಹಾಯ ಮಾಡಿದ ಹಾಗೂ ಪ್ರಮುಖ ಪಾತ್ರ ವಹಿಸಿದವರ ಋಣವನ್ನು ನಾವು ತೀರಿಸಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೇಲ್ಮನೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾಧ್ಯಮದ ಪಶ್ನೆಗೆ ಪ್ರತಿಕ್ರಿಯಿಸಿ ಉತ್ತರಿಸಿದವರ ಸಚಿವರು, ಕಾಂಗ್ರೆಸ್ - ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿಯನ್ನು ನಂಬಿಕೊಂಡು ಅನೇಕರು ಬಂದಿದ್ದಾರೆ. ಇಂತವರು ಸರ್ಕಾರದ ರಚನೆಗೆ ಸಹಾಯ ಮಾಡಿದ್ದಾರೆ ಅವರ ಋಣದಲ್ಲಿ ನಾವಿದ್ದು ಅದನ್ನು ತೀರಿಸಬೇಕಾಗಿದೆ .ಅವರನ್ನೆಲ್ಲಾ ಸುಮ್ಮನೆ ಕರೆದು ಮೋಸ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಉಳಿಸಿದವರಿಗೂ, ಹಳಬರಿಗೂ ಹೊಸಬರಿಗೂ ಸಾಮಾನ್ಯ ಕಾರ್ಯಕರ್ತರಿಗೂ ತೃಪ್ತಿ ಆಗುವ ರೀತಿಯಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಸೋಮವಾರ ಸಂಜೆ ಬಿಜೆಪಿ ಕೋರ್ ಕಮಿಟಿಯ ಸಭೆ ನಡೆಯಲಿದ್ದು ಇಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಪಟ್ಟಿ ಸಿದ್ದ ಮಾಡಿ, ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ ಎಂದರು.