ನವದೆಹಲಿ, ಜೂ.13 (DaijiworldNews/MB) : ಲಾಕ್ಡೌನ್ ಹೇರಿಕೆ ಮಾಡಿದರೂ ಕೂಡಾ ಕೊರೊನಾ ಪ್ರಕರಣ ಸಂಖ್ಯೆ ಏರಿಕೆಯಾಗಿದ್ದು ಆದರೂ ಕೂಡಾ ಅದೇ ಲಾಕ್ಡೌನ್ನ್ನು ಪುನಃ ಮುಂದುವರೆಸುತ್ತಾ ಹೋಗಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಕುರಿತಾಗಿ ಟ್ವೀಟರ್ನಲ್ಲಿ ಲಾಕ್ಡೌನ್ 1, 2,3,4 ಹಂತದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಲ್ಲೇ ಹೋಗಿರುವ ಗ್ರಾಫ್ನ್ನು ಹಾಕಿರುವ ಅವರು, ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡಿ ವಿವಿಧ ಫಲಿತಾಂಶ ನಿರೀಕ್ಷಿಸುವುದು ಹುಚ್ಚುತನ ಎಂದಿದ್ದಾರೆ.
ಶುಕ್ರವಾರವೂ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಯುಎಸ್, ಬ್ರೆಜಿಲ್ ಮತ್ತು ರಷ್ಯಾದ ನಂತರ ಅತಿ ಹೆಚ್ಚು ಕೊವೀಡ್ -19 ಪ್ರಕರಣಗಳು ಭಾರತದಲ್ಲಿ ವರದಿಯಾಗಿರುವುದನ್ನು ಉಲ್ಲೇಖಿಸಿ 'ಭಾರತವು ತಪ್ಪಾದ ಓಟದ ಪಂದ್ಯವನ್ನು ಗೆಲ್ಲುವ ಹಾದಿಯಲ್ಲಿದೆ'. ದುರಹಂಕಾರ ಮತ್ತು ಅಸಮರ್ಥತೆಯ ಮಾರಕ ಮಿಶ್ರಣದಿಂದ ಉಂಟಾದ ಭಯಾನಕ ದುರಂತವಿದು" ಎಂದು ಹೇಳಿದ್ದರು.