ಬೆಂಗಳೂರು, ಜೂ 13 (DaijiworldNews/PY) : ಜೂನ್ 12ರ ಸಂಜೆ 5 ಗಂಟೆಯಿಂದ ಜೂನ್ 13ರ ಸಂಜೆ 5 ಗಂಟೆವರೆಗೆ ರಾಜ್ಯದಲ್ಲಿ 308 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿರುವುದಾಗಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,824 ಏರಿದ್ದು, ಇಲ್ಲಿಯವರೆಗೆ 81 ಮಂದಿ ಮೃತಪಟ್ಟಿದ್ದಾರೆ.
ಇಂದು ಕಲಬುರ್ಗಿಯಲ್ಲಿ 67, ಯಾದಗಿರಿಯಲ್ಲಿ 52, ಬೀದರ್ನಲ್ಲಿ 42, ಬೆಂಗಳೂರು ನಗರದಲ್ಲಿ 31, ದಕ್ಷಿಣ ಕನ್ನಡದಲ್ಲಿ 30, ಧಾರವಾಡದಲ್ಲಿ 20, ಉಡುಪಿಯಲ್ಲಿ 14, ಹಾಸನದಲ್ಲಿ 11, ಬಳ್ಳಾರಿಯಲ್ಲಿ 11, ವಿಜಯಪುರದಲ್ಲಿ 6, ರಾಯಚೂರಿನಲ್ಲಿ 5, ಉತ್ತರ ಕನ್ನಡದಲ್ಲಿ 5, ಕೋಲಾರದಲ್ಲಿ 4, ದಾವಣಗೆರೆಯಲ್ಲಿ 3, ಮಂಡ್ಯದಲ್ಲಿ 2, ಹಾವೇರಿಯಲ್ಲಿ 2, ಮೈಸೂರಿನಲ್ಲಿ 1, ಬಾಗಲಕೋಟೆಯಲ್ಲಿ 1 ಹಾಗೂ ರಾಮನಗರದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಇಂದು 209 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 3,648 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 3,092 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 15 ಜನರಿಗೆ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.