ಬೆಂಗಳೂರು, ಜೂ 13 (DaijiworldNews/PY) : ರೈತರ ಭೂಮಿಗೆ ಉತ್ತಮ ಬೆಲೆ ಸಿಗಲಿದೆ. ಕೃಷಿ ಚಟುವಟಿಕೆ ಹೆಚ್ಚಳಕ್ಕೂ ಅನುಕೂಲ ಆಗಲಿದೆ. ಕೈಗಾರಿಕೆ ಸ್ಥಾಪನೆ ಮಾಡುವವರು ಭೂಮಿ ಖರೀದಿ ಮಾಡುವುದು ಇನ್ನು ಸುಲಭ ಆಗಲಿದೆ. ಹೀಗಾಗಿಯೇ ಸುಗ್ರೀವಾಜ್ಞೆ ತರಲು ಹೊರಟಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೂ ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಅನುಕೂಲವಾಗಲಿದೆ. ಇದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಸಹಕಾರ ನೀಡಬೇಕು. ರೈತರು ಹಾಗೂ ಕೈಗಾರಿಕೋದ್ಯಮಿಗಳಿಬ್ಬರಿಗೂ ಅನುಕೂಲವಾಗಲಿರುವ ಕಾರ್ಯಕ್ಕೆ ಪ್ರತಿಪಕ್ಷಗಳೂ ಕೂಡಾ ಸಹಕರಿಸಬೇಕು ಎಂದು ತಿಳಿಸಿದರು.
ನಮ್ಮ ಕಾರ್ಯವನ್ನು ಕಾಯ್ದೆಯ ಅನುಕೂಲಗಳನ್ನು ಗಮನಿಸಿಯೇ ಸ್ವಾಗತಿಸುತ್ತಿದ್ದಾರೆ. ವಿರೋಧಿಸುತ್ತಿರುವ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಗೂ ಇದರ ಪ್ರಯೋಜನವು ಮುಂದಿನ ದಿನಗಳಲ್ಲಿ ತಿಳಿಯಲಿದೆ. ನಾನು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಕಾಯ್ದೆಯ ಉಪಯೋಗಗಳನ್ನು ಮನವರಿಕೆ ಮಾಡಿಸುತ್ತೇನೆ ಎಂದರು.