ನವದೆಹಲಿ, ಜೂ 14 (DaijiworldNews/PY) : ಪತ್ರಕರ್ತ ವಿನೋದ್ ದುವಾ ಅವರ ವಿರುದ್ದ ದಾಖಲಾಗಿರುವ ದೇಶದ್ರೋಹ ಪ್ರಕರಣ ಕುರಿತು ನಡೆಯುತ್ತಿರುವ ತನಿಖೆಗೆ ತಡೆ ನೀಡಲು ಹಾಗೂ ಅವರನ್ನು ಜುಲೈ 6ರವರೆಗೆ ಬಂಧಿಸದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಭಾನುವಾರ ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಂ.ಎಂ.ಶಾಂತನಗೌಡರ್ ಹಾಗೂ ವಿನೀತ್ ಸರನ್ ಅವರು ಇರುವ ನ್ಯಾಯಪೀಠ ವಿಶೇಷ ವಿಚಾರಣೆ ನಡೆಸಿದ್ದು. ವಿಚಾರಣೆಗೆ ದುವಾ ಹಾಜರಾಗಬೇಕು ಎಂದು ನ್ಯಾಯಪೀಠ ಆದೇಶಿಸಿದೆ. ಅಲ್ಲದೇ, ಕೇಂದ್ರ ಸರ್ಕಾರ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ವಾರಗಳ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿತು.
ಯೂಟ್ಯೂಬ್ನಲ್ಲಿ ಪ್ರಸಾರವಾದ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ದುವಾ ವಿರುದ್ದ ಹಿಮಾಚಲ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.