ನವದೆಹಲಿ, ಜೂ.14 (DaijiworldNews/MB) : ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಲು ನಿಮ್ಮ ಸಲಹೆ, ಅಭಿಪ್ರಾಯ ತಿಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಈ ತಿಂಗಳ 28 ರಂದು ಮನ್ ಕಿ ಬಾತ್ ಕಾರ್ಯಕ್ರಮ ನಡೆಯಲಿದೆ. 2 ವಾರಗಳ ಕಾಲವಿದ್ದರೂ ನನ್ನೊಂದಿಗೆ ನಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನು ದಯವಿಟ್ಟು ಹಂಚಿಕೊಳ್ಳಿ. ಇದರಿಂದಾಗಿ ಹಲವು ಕಮೆಂಟ್, ಫೋನ್ ಕಾಲ್ ಗಳನ್ನು ಸ್ವೀಕರಿಸಲು ನನಗೆ ಸಾಧ್ಯವಾಗುತ್ತದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಸಂಬಂಧಿಸಿ ನಿಮ್ಮಲ್ಲಿ ಹಲವು ವಿಷಯಗಳು ಇರುವುದು ಖಚಿತ ಎಂದು ಹೇಳಿದ್ದಾರೆ.
ಹಾಗೆಯೇ ನಿಮ್ಮ ಆಲೋಚನೆಗಳು ಯಾವಾಗಲೂ ಮನ್ ಕಿ ಬಾತ್ ಕಾರ್ಯಕ್ರಮದ ಶಕ್ತಿಯಾಗಿದ್ದು, ಇದು 130 ಕೋಟಿ ಭಾರತೀಯರ ಸಾಮರ್ಥ್ಯವನ್ನು ಪ್ರದರ್ಶಿಸುವ ಒಂದು ರೋಮಾಂಚಕ ವೇದಿಕೆಯಾಗಿದೆ ಎಂದಿದ್ದಾರೆ.
ಹಾಗೆಯೇ ಜನರು ಸಲಹೆ, ಅಭಿಪ್ರಾಯಗಳನ್ನು ನೀಡಲು ಸಂಖ್ಯೆಯೊಂದನ್ನು ನೀಡಿದ್ದು ನಮೊ ಆಪ್ ಅಥವಾ ಮೈಗವರ್ಮೆಂಟ್ ಮೂಲಕ ತಿಳಿಸಬಹುದು ಎಂದು ಹೇಳಿದ್ದಾರೆ.