ಬೆಂಗಳೂರು, ಜೂ. 14 (DaijiworldNews/SM): ಕರ್ನಾಟಕದಲ್ಲಿ ರವಿವಾರದಂದು ಮತ್ತೆ ಹೊಸದಾಗಿ 176 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏಳು ಸಾವಿರದ ಗಡಿ ದಾಟಿದೆ.
ಈ ನಡುವೆ ರವಿವಾರದಂದು ರಾಜ್ಯದಲ್ಲಿ 5 ಮಂದಿ ಕೊರೋನಾ ಮಹಾಮಾರಿಯಿಂದಾಗಿ ಮೃತಪಟ್ಟಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ 86ಕ್ಕೆ ಏರಿಕೆಯಾದಂತಾಗಿದೆ. ರಾಜ್ಯದಲ್ಲಿ ಪತ್ತೆಯಾಗಿರುವ 7000 ಪ್ರಕರಣಗಳ ಪೈಕಿ 3,955 ಮಂದಿ ಗುಣಮುಖರಾಗಿದ್ದಾರೆ. ಹಾಗೂ 2,956 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.