ನವದೆಹಲಿ, ಜೂ.15 (DaijiworldNews/MB) : ಇಂಧನಗಳನ್ನೂ ಕೂಡಾ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯಡಿಗೆ ತರಬೇಕು ಎಂದು ಕಾಂಗ್ರೆಸ್ ಆಗ್ರಹಿಸಿರುವ ಕಚ್ಚಾ ತೈಲಗಳ ಅಗ್ಗವಾದಗ ಅದರ ಲಾಭವನ್ನು ಜನರಿಗೆ ಮಾಡಿಕೊಡಬೇಕು. ಆಗಸ್ಟ್ 2004ರ ಮಟ್ಟಕ್ಕೆ ಪೆಟ್ರೋಲ್-ಡೀಸೆಲ್-ಅಡುಗೆ ಅನಿಲದ ದರವನ್ನು ಇಳಿಸಬೇಕು ಎಂದು ಒತ್ತಾಯಿಸಿದೆ.
ಈ ಬಗ್ಗೆ ಮಾತನಾಡಿದ ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ, ಮೋದಿ ಸರ್ಕಾರ 2014ರ ಮೇ ತಿಂಗಳಿನಿಂದ ಈವರೆಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು 12 ಬಾರಿ ಹೆಚ್ಚಿಸಿದೆ. ಭಾರತಕ್ಕೆ ಲೀಟರ್ಗೆ 20 ರೂ.ಗಿಂತ ಕಡಿಮೆ ಬೆಲೆಗೆ ಪೆಟ್ರೋಲ್ ಸಿಗುತ್ತಿದ್ದು ಆದರೆ ಲೀಟರ್ಗೆ 75.78 ರೂ. ಮತ್ತು ಡೀಸೆಲ್ ಅನ್ನು 74.03 ರೂ.ಗೆ ಯಾಕೆ ಮಾರಾಟ ಮಾಡಲಾಗುತ್ತಿದೆ ಎಂದು ವಿವರವಾಗಿ ಮೋದಿ ಮತ್ತು ಅವರ ಸರ್ಕಾರ ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಇಂಧನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವವರೆಗೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಕೂಡಾ ಹೇಳಿದರು.
ಹಾಗೆಯೇ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 40 ಡಾಲರ್ಗೆ ಇಳಿದರೂ ಕೂಡಾ ನಮ್ಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಹೆಚ್ಚಿನ ದರಕ್ಕೆ ಯಾಕೆ ಮಾರಾಟ ಮಾಡಲಾಗುತ್ತಿದೆ? ಎಂದು ಪ್ರಧಾನಿ ಮೋದಿಗೆ ಅವರು ಪ್ರಶ್ನಿಸಿದರು.