ದೆಹಲಿ, ಜೂ.15 (DaijiworldNews/MB) : ಕುಟುಂಬಕ್ಕೆ ಕೊರೊನಾ ಹರಡಲು ನಾನು ಕಾರಣವಾಗಬಾರದು ಎಂದು ಐಆರ್ಎಸ್ ಅಧಿಕಾರಿಯೊಬ್ಬರು ಆ್ಯಸಿಡ್ನತಿರುವ ದ್ರಾವಣ'ವೊಂದನ್ನು ಸೇವಿಸಿ ಕಾರಿನಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಕೊಂಡ ಐಆರ್ಎಸ್ ಅಧಿಕಾರಿ 56 ವರ್ಷದ ಶಿವರಾಜ್ ಸಿಂಗ್ ದೆಹಲಿಯ ಆರ್ಕೆ ಪುರಂನ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಆತ್ಮಹತ್ಯೆ ಮಾಡಿಕೊಂಡಿರುವ ಕಾರಿನೊಳಗಡೆ, "ಕುಟುಂಬಕ್ಕೆ ಕೊರೊನಾ ಹರಡಲು ನಾನು ಕಾರಣವಾಗಬಾರದು. ಅವರು ಸಂಕಷ್ಟಕ್ಕೆ ಒಳಗಾಗವುದು ನನಗೆ ಇಷ್ಟವಿಲ್ಲ" ಎಂದು ಬರೆದಿರುವ ಟಿಪ್ಪಣಿ ದೊರೆತಿದೆ ಎಂದು ವರದಿ ತಿಳಿಸಿದೆ.
ಇನ್ನು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗೆ ಕೊರೊನಾ ಸೋಂಕು ಇತ್ತೆ, ಇರಲಿಲ್ಲವೇ ಎಂಬ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.