ಪಟನಾ, ಜೂ.15 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಅವರ ರಾಜ್ಯವಾದ ಬಿಹಾರದ ಜನರು ಮರುಕ ವ್ಯಕ್ತಪಡಿಸಿದ್ದು ಈ ಪ್ರಕರಣದ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕೋಸಿ ಸೀಮಾಂಚಲ್ ಪ್ರದೇಶದ ರಾಜಕೀಯ ನಾಯಕರಾದ ಲವ್ಲಿ ಆನಂದ್ ಮತ್ತು ಪಪ್ಪು ಯಾದವ್ ಅವರು ಸುಶಾಂತ್ ಸಿಂಗ್ ಕುಟುಂಬಸ್ಥರನ್ನು ಭೇಟಿಯಾಗಿ ಸಂತಾಪ ವ್ಯಕ್ತಪಡಿಸಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಹಾಗೆಯೇ ಬಿಹಾರದ ಆಮ್ ಆದ್ಮಿ ಘಟಕವೂ ಸುಶಾಂತ್ ಸಾವಿನ ಸಿಬಿಐ ತನಿಖೆಗೆ ಆಗ್ರಹಿಸಿದ್ದು, "ಬಿಹಾರಿಗಳ ವಿರುದ್ಧದ ಬಾಲಿವುಡ್ ಹಗೆತನ 34 ವರ್ಷದ ಚಿಕ್ಕ ವಯಸ್ಸಿನಲ್ಲಿ ನಟನ ಆತ್ಮಹತ್ಯೆಗೆ ಕಾರಣವಾಗಿದೆ" ಎಂದು ಹೇಳಿದೆ.
ಸುಶಾಂತ್ ಸಿಂಗ್ ರಜಪೂತ್ ಅವರು ಭಾನುವಾರ ತಮ್ಮ ಮುಂಬೈನ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.