ಮುಂಬೈ, ಜೂ 15 (DaijiworldNews/PY) : ಚೀನಾ ಹಾಗೂ ಪಾಕಿಸ್ತಾನದ ಭೂಮಿ ಬೇಡ. ನಮಗೆ ಶಾಂತಿ ಬೇಕು, ಹಿಂಸಾಚಾರವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಗುಜರಾತ್ನಲ್ಲಿ ಮಡೆದ ಬಿಜೆಪಿಯ ವರ್ಚುವಲ್ ಜನ ಸಂವಾದ್ ರ್ಯಾಲಿಯಲ್ಲಿ ಇತ್ತೀಚಿಗಿನ ಭಾರತ ಹಾಗೂ ಚೀನಾ ನಡುವೆ ನಡೆದ ಲಡಾಖ್ ಗಡಿ ವಿವಾದ ಹಿನ್ನೆಲೆ ಈ ಹೇಳಿಕೆಯನ್ನು ಗಡ್ಕರಿ ಅವರು ನೀಡಿದ್ದಾರೆ.
ಎರಡನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸಿದ ನರೇಂದ್ರ ಮೋದಿ ಸರ್ಕಾರದ ಕಾರ್ಯದ ಬಗ್ಗೆ ಮಾತನಾಡಿದ ಅವರು, ಆಂತರಿಕ ಹಾಗೂ ಬಾಹ್ಯ ಭದ್ರತೆಯ ವಿಷಯಗಳೊಂದಿಗೆ ವ್ಯವಹರಿಸಿ ಅದರ ಮೂಲಕ ಶಾಂತಿ ತರುವುದು ಈ ಸರ್ಕಾರದ ಮಹತ್ವದ ಸಾಧನೆಯಾಗಿದೆ ಎಂದು ತಿಳಿಸಿದರು.
ವಿಡಿಯೋ ಕಾನ್ಪರೆನ್ಸ್ನಲ್ಲಿ ಮಾತನಾಡಿದ ಅವರು, ಮಾವೋವಾದಿ ಸಮಸ್ಯೆಯನ್ನು ಇದು ಬಹುತೇಕ ಗೆಲ್ಲುವ ವಿಚಾರದ ಬಗ್ಗೆಯಾಗಲಿ ಅಥವಾ ಪಾಕಿಸ್ತಾನದ ಪ್ರಾಯೋಜಿವಾದ ಭಯೋತ್ಪಾದನೆಯಿಂದ ದೇಶವನ್ನು ಭದ್ರಪಡಿಸುವುದಕ್ಕಾಗಲಿ ನಮಗೆ ಹಿಂಸಾಚಾರ ಬೇಡ ಬದಲಾಗಿ ನಮಗೆ ಶಾಂತಿ ಮುಖ್ಯ ಎಂದರು.