ನವದೆಹಲಿ, ಜೂ.15 (DaijiworldNews/MB) : ದೇಶದಲ್ಲಿ ಕಳೆದ ಒಂದು ದಿನದಲ್ಲೇ 11,502 ಜನರಿಗೆ ಸೋಂಕು ದೃಢಪಟ್ಟಿದ್ದು 325 ಜನ ಸಾವನ್ನಪ್ಪಿದ್ದಾರೆ. ಪ್ರಸ್ತುತ ದೇಶದಲ್ಲಿ ಸೋಂಕಿತರ ಸಂಖ್ಯೆ 3,32,424 ಕ್ಕೆ ಏರಿಕೆಯಾಗಿದ್ದು 9,520 ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನು ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಅಧಿಕವಾಗುತ್ತಿದ್ದರೂ ಏತನ್ಮಧ್ಯೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ದೇಶದಲ್ಲಿ 1,53,106 ಸಕ್ರಿಯ ಪ್ರಕರಣಗಳಾಗಿದ್ದು ಇದಕ್ಕಿಂತ ಅಧಿಕವಾಗಿ ಅಂದರೆ 1,69,798 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನು ಕೊರೊನಾ ಸೋಂಕಿನಿಂದ ನಲುಗಿರುವ ಮಹಾರಾಷ್ಟ್ರದಲ್ಲಿ 1,07,958 ಜನರಿಗೆ ಸೋಂಕು ತಗುಲಿದ್ದು 3,950 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 50,978 ಮಂದಿ ಗುಣಮುಖರಾಗಿದ್ದು 53,030 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 7000 ಮಂದಿಗೆ ಸೋಂಕು ದೃಢಪಟ್ಟಿದ್ದು 86 ಮಂದಿ ಸಾವನ್ನಪ್ಪಿದ್ದಾರೆ. 2959 ಸಕ್ರಿಯ ಪ್ರಕರಣಗಳಾಗಿದ್ದು 3955 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 44661, ದೆಹಲಿಯಲ್ಲಿ 41182, ಗುಜರಾತ್ನಲ್ಲಿ 23544, ಉತ್ತರ ಪ್ರದೇಶದಲ್ಲಿ 13615, ರಾಜಸ್ತಾನದಲ್ಲಿ 12694, ಮಧ್ಯಪ್ರದೇಶದಲ್ಲಿ 10802, ಪಶ್ಚಿಮ ಬಂಗಾಳದಲ್ಲಿ 11087ಪ್ರಕರಣಗಳು ದಾಖಲಾಗಿದೆ.