ಬೆಂಗಳೂರು, ಜೂ.15 (DaijiworldNews/MB) : ಕೆಲವೊಮ್ಮೆ ಸಾಮಾನ್ಯ ಜನರಿಗೆ ಅರ್ಥವಾಗದ ಕೆಲವೊಂದು ಇಂಗ್ಲೀಷ್ ಪದಗಳನ್ನು ಬಳಸಿ ಟ್ವೀಟ್ ಮಾಡುವ ತಿರುವನಂತಪುರದ ಸಂಸದ ಶಶಿ ತರೂರ್ ಅವರು hippopotomonstrosesquipedaliophobia ಎಂಬ ಪದವನ್ನು ಬಳಸಿದ್ದು ಈಗ ನೆಟ್ಟಿಗರು ಗೂಗಲ್ ಮಾಡಿ ನೋಡುವಂತಾಗಿದೆ.
ಹಾಸ್ಯ ವಿಡಿಯೊಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ನಜ್ಮಾ ಆಪಿ ಎಂದೇ ಖ್ಯಾತರಾಗಿರುವ ಸಲೋನಿ ಗೌರ್ ಅವರು ಶಶಿ ತರೂರ್ ಅವರನ್ನು ಅನುಕರಣೆ ಮಾಡಿ ವಿಡಿಯೋ ಮಾಡಿದ್ದು ಈ ವಿಡಿಯೊಗೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಅವರು hippopotomonstrosesquipedaliophobia ಎಂಬ ಪದವನ್ನು ಬಳಸಿದ್ದಾರೆ.
ಸುಶ್ಮಿತಾ ಸೇನ್ ಅವರ ಹೊಸ ವೆಬ್ ಸರಣಿ ಆರ್ಯಾದಲ್ಲಿ ಚಂದ್ರಚೂರ್ ಸಿಂಗ್ ನಟಿಸಿದ ಪಾತ್ರ ಮತ್ತು ಶಶಿ ತರೂರ್ ನಡುವಿನ ಸಾಮ್ಯತೆ ಬಗ್ಗೆ ಸಲೋನಿ ಮಾತನಾಡಿದ್ದರು. ಈ ವಿಡಿಯೋವನ್ನು ರೀಟ್ವೀಟ್ ಮಾಡಿದ ಸಿನಿಮಾ ನಿರ್ಮಾಪಕ ಹನ್ಸಲ್ ಮೆಹ್ತಾ ತರೂರ್ ಅವರನ್ನು ಟ್ಯಾಗ್ ಮಾಡಿ ಇದನ್ನು ನೋಡಿದ್ದೀರಾ ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿತಿಸಿರುವ ಶಶಿ ತರೂರ್ hippopotomonstrosesquipedaliophobia ಪದ ಬಳಸಿ ಅನುಕರಣೆ ಚೆನ್ನಾಗಿದೆ ಎಂದು ಹೇಳಿದ್ದು ಇದೀಗ ಈ ಪದವನ್ನೇ ಬಳಸಿ ನೆಟ್ಟಿಗರು ಮೀಮ್ಗಳನ್ನು ಮಾಡಿದ್ದಾರೆ.