ನವದೆಹಲಿ, ಜೂ 15 (DaijiworldNews/PY) : ಕೊರೊನಾ ಪರೀಕ್ಷೆಗಾಗಿ ಕಂಟೈನ್ಮೆಂಟ್ ಪ್ರದೇಶ ಹಾಗೂ ಆಸ್ಪತ್ರೆಗಳಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಯೊಂದಿಗೆ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ಗಳನ್ನು ಉಪಯೋಗಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಶಿಫಾರಸು ಮಾಡಿದೆ.
ಸಾಂದರ್ಭಿಕ ಚಿತ್ರ
ಈ ಕಿಟ್ಗಳು ಪ್ರಯೋಗಾಲಯದ ಪರೀಕ್ಷೆಗಳಿ ಇಲ್ಲದೆಯೇ ವ್ಯಕ್ತಿಯಲ್ಲಿ ಸೋಂಕು ಇದೆಯೋ ಇಲ್ಲಯೋ ಎನ್ನುವ ಬಗ್ಗೆ ಕೂಡಲೇ ನಿಖರವಾಗಿ ಪತ್ತೆಹಚ್ಚಲು ಸಹಾಯವಾಗಲಿವೆ.
ಸ್ಟ್ಯಾಂಡರ್ಡ್ ಕ್ಯು ಕೋವಿಡ್-19 ಎಜಿ ಡಿಟೆಕ್ಷನ್ ಕಿಟ್ ಅನ್ನು ದಕ್ಷಿಣ ಕೊರಿಯಾದ ಎಸ್ಡಿ ಬಯೋಸೆನ್ಸರ್ ಕಂಪನಿಯು ಅಭಿವೃದ್ದಿಪಡಿಸಿದೆ. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ ಮೂಲಕ ನಡೆಸಿದ ಪರೀಕ್ಷೆಯಲ್ಲಿ ವ್ಯಕ್ತಿಗೆ ಸೋಂಕು ಇಲ್ಲ ಎನ್ನುವುದು ದೃಢಪಟ್ಟರೆ ಅಂಥಹ ವ್ಯಕ್ತಿಗಳನ್ನು ಮಾತ್ರ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಈ ಪರೀಕ್ಷೆಯ ಸಂದರ್ಭ ಸೋಂಕು ಇರುವುದು ಖಚಿತವಾದರೆ, ಪುನಃ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಸೋಂಕು ಇರುವುದು ದೃಢಪಟ್ಟಲ್ಲಿ ಮತ್ತೊಮ್ಮೆ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿ ಖಚಿತಪಡಿಸಿಕೊಳ್ಳುವಂತ ಅಗತ್ಯವಿಲ್ಲ ಎಂಬುದಾಗಿ ಐಸಿಎಂಆರ್ ಹೇಳಿದೆ.
ಈ ಕಿಟ್ ಕನಿಷ್ಠ 15 ರಿಂದ ಗರಿಷ್ಠ 30 ನಿಮಿಷದೊಳಗಾಗಿ ಸೋಂಕು ಇದಯೋ ಇಲ್ಲವೋ ಎನ್ನುವುದನ್ನು ತಿಳಿಸುತ್ತದೆ. ಅಲ್ಲದೇ. ಯಾವುದೇ ಉಪಕರಣಗಳು ಪರೀಕ್ಷಾ ವರದಿಯನ್ನು ವೀಕ್ಷಿಸಲು ಅಗತ್ಯವಿಲ್ಲ. ಕಿಟ್ನಲ್ಲೇ ವರದಿಯು ಬರಿಗಣ್ಣಿಗೆ ಕಾಣಿಸುತ್ತದೆ ಎಂದು ತಿಳಿಸಿದೆ.