ಪಣಜಿ, ಜೂ.16 (DaijiworldNews/MB) : ಮಾಜಿ ಸಿಎಂ ಮನೋಹರ್ ಪರಿಕ್ಕರ್ ನಿಧನರಾದ ಬಳಿಕ ಗೋವಾದಲ್ಲಿ ಪ್ರಮೋದ್ ಸಾವಂತ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಬಹು ದೊಡ್ಡ ತಪಪ್ಉ ಮಾಡಿದ್ದೇವೆ. ಈ ಕಾರಣದಿಂದಾಗಿ ಗೋವಾ ಜನರ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ (ಜಿ.ಎಫ್.ಪಿ.) ಮುಖ್ಯಸ್ಥ, ಮಾಜಿ ಉಪ ಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.
ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸಮರ್ಥವಾಗಿದೆ. ಯಾವುದೇ ಪಾರದರ್ಶಕತೆ ಇಲ್ಲ. ಮುಂದೆ ಇಂತಹ ಅಸಮರ್ಥ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದಿಲ್ಲ. ಬಿಜೆಪಿಗೆ ರಾಜ್ಯದಲ್ಲಿ ಯಾವುದೇ ಭವಿಷ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಕಾರಣದಿಂದ ಬಿ.ಎಫ್.ಪಿ. ಸೇರಿದಂತೆ ಮತ್ತಿತರರ ಬೆಂಬಲ ಪಡೆದು ಬಿಜೆಪಿ ಸರಕಾರ ರಚನೆ ಮಾಡಿತ್ತು. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಕಳೆದ ಜುಲೈನಲ್ಲಿ ಕಾಂಗ್ರೆಸ್ನ 10 ಶಾಸಕರು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಸರ್ದೇಸಾಯಿ ಸೇರಿದಂತೆ ಬಿ.ಎಫ್.ಪಿ.ಯ ಇಬ್ಬರು ಶಾಸಕರನ್ನು ಸಂಪುಟದಿಂದ ಕೈಬಿಡಲಾಗಿತ್ತು.