ನವದೆಹಲಿ, ಜೂ 16 (Daijiworld News/MSP): ದೇಶಾದ್ಯಂತ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಂತೆ, "ಕೊರೊನಾ ವೈರಸ್ ವಿಚಾರವಾಗಿ ಗುಜರಾತ್ ಮಾದರಿ ಬಹಿರಂಗವಾಗಿದೆ" ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ.
ಬಿಬಿಸಿ ವರದಿಯನ್ನು ಆಧರಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿ, ದೇಶಾದ್ಯಂತ ಕೊರೊನಾ ವೈರಸ್ನಿಂದ ಮೃತಪಟ್ಟ ವ್ಯಕ್ತಿಗಳ ಅಂಕೆ ಸಂಖ್ಯೆ ಮುಂದಿಟ್ಟುಕೊಂಡು ಮೋದಿ ತವರೂರಾದ ಗುಜರಾತ್ನಲ್ಲೇ ಅತಿ ಹೆಚ್ಚು ಮರಣ ಪ್ರಮಾಣವಿದೆ. ಸಾವಿನ ಸಂಖ್ಯೆಯಲ್ಲೂ ಗುಜರಾತ್ ಮಾದರಿ ಬಹಿರಂಗವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಗುಜರಾತ್ನಲ್ಲಿ ಮರಣ ಪ್ರಮಾಣ ಶೇ.6.25ರಷ್ಟಿದೆ ಮಹಾರಾಷ್ಟ್ರದಲ್ಲಿ 3.73 ಇದೆ, ರಾಜಸ್ಥಾನದಲ್ಲಿ ಶೇ.2.32, ಪಂಜಾಬ್ ಶೇ.2.17, ಪುದುಚೆರಿ ಶೇ.1.98, ಜಾರ್ಖಂಡ್ ಶೇ.0.5, ಛತ್ತೀಸ್ಗಢ ಶೇ.0.35 ರಷ್ಟಿದೆ.
ಬಿಜೆಪಿ ಆಡಳಿತವಿರುವ ಗುಜರಾತ್ನ್ನು ಕಾಂಗ್ರೆಸ್ ಆಡಳಿತವಿರುವ ಉಳಿದ ರಾಜ್ಯಗಳೊಂದಿಗೆ ರಾಹುಲ್ ಗಾಂಧಿ ಹೋಲಿಕೆ ಮಾಡಿ ಪ್ರಶ್ನಿಸಿದ್ದಾರೆ. ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ ಗುಜರಾತ್ ನಲ್ಲಿ ಹೆಚ್ಚು ಜನ ಸಾವನ್ನಪ್ಪಿದ್ದು ಇದುವರೆಗೆ 21,500 ಪ್ರಕರಣಗಳು ದೃಢಪಟ್ಟಿವೆ.