ನವದೆಹಲಿ, ಜೂ.16 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲ್ಲೇ ಇದ್ದು ಕಳೆದ ಒಂದು ದಿನದಲ್ಲಿ ದೇಶದಲ್ಲಿ 10,667 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಹಾಗೆಯೇ 380 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಪ್ರಸ್ತುತ ಕೊರೊನಾ ಸೋಂಕಿತರ ಸಂಖ್ಯೆ 3,43,091 ಕ್ಕೆ ಏರಿಕೆಯಾಗಿದ್ದು 9,900 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆಯೂ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ದೇಶದಲ್ಲಿ 1,53,178 ಸಕ್ರಿಯ ಪ್ರಕರಣಗಳಾಗಿದ್ದು 1,80,013 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನು ದೇಶದಲ್ಲೇ ಅಧಿಕ ಕೊರೊನಾ ಸೋಂಕು ದಾಖಲಾಗಿರುವ ಮಹಾರಾಷ್ಟ್ರದಲ್ಲಿ 1,10,744 ಜನರಿಗೆ ಸೋಂಕು ತಗುಲಿದ್ದು 4,128 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 56,049 ಮಂದಿ ಗುಣಮುಖರಾಗಿದ್ದು 50,567 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 7,213 ಮಂದಿಗೆ ಸೋಂಕು ದೃಢಪಟ್ಟಿದ್ದು 89 ಮಂದಿ ಸಾವನ್ನಪ್ಪಿದ್ದಾರೆ. 2,989 ಸಕ್ರಿಯ ಪ್ರಕರಣಗಳಾಗಿದ್ದು 4,135 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 46504, ದೆಹಲಿಯಲ್ಲಿ 42,829, ಗುಜರಾತ್ನಲ್ಲಿ 24,055, ಉತ್ತರ ಪ್ರದೇಶದಲ್ಲಿ 13,615, ರಾಜಸ್ತಾನದಲ್ಲಿ 12,981, ಮಧ್ಯಪ್ರದೇಶದಲ್ಲಿ 10,935, ಪಶ್ಚಿಮ ಬಂಗಾಳದಲ್ಲಿ 11,494 ಪ್ರಕರಣಗಳು ದಾಖಲಾಗಿದೆ.