ಬೆಂಗಳೂರು, ಜೂ.16 (DaijiworldNews/MB) : ಭಾನುವಾರ ಜೂನ್ 21ರಂದು ಸೌರಮಂಡಲದಲ್ಲಿ ಮತ್ತೊಂದು ಗ್ರಹಣ ಸಂಭವಿಸಲಿದ್ದು ಇದಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚೂಡಾಮಣಿ ಸೂರ್ಯಗ್ರಹಣ ಎಂದು ಕರೆಯಲಾಗಿದೆ.
ಬೆಳಿಗ್ಗೆ ಸುಮಾರು 10.13ರಿಂದ ಮಧ್ಯಾಹ್ನ 1.32ರವರೆಗೆ ಈ ಗ್ರಹಣ ಸಂಭವಿಸಲಿದೆ. ಈ ಗ್ರಹಣದ ಕಾರಣದಿಂದಾಗಿ ದೇವಾಲಯಗಳಿಗೆ ಹೆಚ್ಚಿನ ಜನರು ಬರುವ ಸಾಧ್ಯತೆಗಳಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇನ್ನು ಈ ಬಗ್ಗೆ ಗಾಳಿ ಆಂಜನೇಯ ದೇವಸ್ಥಾನದ ಅರ್ಚಕರಾದ ಡಾ.ಶ್ರೀನಿವಾಸ್ ಭಟ್ಟಾಚಾರ್ಯ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ದೇವಾಲಯಕ್ಕೆ ಬರುವ ಭಕ್ತರು ನಿಯಮಗಳನ್ನು ಉಲ್ಲಂಘಿಸಬಾರದು. ಹಿರಿಯರು, ಮಕ್ಕಳು ದೇವಾಲಯಕ್ಕೆ ಬರದೇ ಮನೆಯಲ್ಲೇ ಪೂಜೆ ಸಲ್ಲಿಸಿ ಎಂದು ಹೇಳಿದ್ದಾರೆ.