ನವದೆಹಲಿ, ಜೂ.16 (DaijiworldNews/MB) : ಕಳೆದ 10 ದಿನಗಳಿಂದ ಇಂಧನ ಬೆಲೆ ಏರಿಕೆ ಮಾಡಲಾಗುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವಾಗ ಅದರ ಲಾಭವನ್ನು ಜನರಿಗೆ ನೀಡದೆ ಇಂಧನ ಬೆಲೆ ಹೆಚ್ಚು ಮಾಡುತ್ತಿದೆ. ಕಚ್ಚಾ ತೈಲ ಬೆಲೆ ಇಳಿಕೆ ಲಾಭ ಜನರಿಗೆ ಯಾಕೆ ನೀಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಕೊರೊನಾ ಕಾರಣದಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದು ಈ ಸಂದರ್ಭದಲ್ಲಿ ಈ ರೀತಿಯಾಗಿ ಇಂಧನ ಬೆಲೆ ಏರಿಕೆ ಮಾಡುತ್ತಿರುವ ಹಿಂದೆ ಸರ್ಕಾರದ ತಾರ್ಕಿಕ ನಿರ್ಧಾರವೇನೆಂದು ಅರ್ಥವಾಗುತ್ತಿಲ್ಲ. ಕೂಡಲೇ ಇಂಧನ ಬೆಲೆ ಹೆಚ್ಚಳವನ್ನು ಹಿಂಪಡೆದು ಕಚ್ಚಾ ತೈಲ ಬೆಲೆ ಇಳಿಕೆಯ ಪ್ರಯೋಜನ ಜನರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರವು ಸರಿಯಲ್ಲದ ಕ್ರಮದಿಂದ 2,60,000 ಕೋಟಿ ರೂಪಾಯಿ ಆದಾಯ ಗಳಿಸುವ ಯತ್ನ ನಡೆಸುತ್ತಿದ್ದು ಇದು ನ್ಯಾಯಯುತವಾಗಿಲ್ಲ ಎಂದು ದೂರಿದ್ದಾರೆ.