ನವದೆಹಲಿ, ಜೂ.17 (DaijiworldNews/MB) : ಲಡಾಕ್ನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆಸುವ ಮೂಲಕ ಜೂನ್ 6 ರಂದು ಮಾಡಿಕೊಂಡ ಒಪ್ಪಂದಕ್ಕೆ ಬದ್ಧವಾಗಿರಲು ಚೀನಾ ವಿಫಲವಾಗಿದೆ ಎಂದು ಭಾರತ ಮಂಗಳವಾರ ಆರೋಪಿಸಿದೆ.
ಮೇ ಆರಂಭದಿಂದ ಭಾರತ-ಚೀನಾ ಪಡೆಗಳ ನಡುವೆ ಪೂರ್ವ ಲಡಾಕ್ನಲ್ಲಿ ಸಂಘರ್ಷ ನಡೆಯುತ್ತಿದ್ದು ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ಉಭಯ ದೇಶಗಳ ಹಿರಿಯ ಸೇನಾಧಿಕಾರಿಗಳ ನಡುವೆ ಜೂನ್ 6 ರಂದು ಮಾತುಕತೆ ನಡೆದು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವಾಲಯ ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ತವ್, ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಜವಾಬ್ದಾರಿಯುತವಾಗಿದ್ದು ಭಾರತದ ಎಲ್ಲಾ ಚಟುವಟಿಕೆಗಳು ಭಾರತದಲ್ಲೇ ನಡೆಯುತ್ತದೆ. ಚೀನಾದಿಂದಲೂ ಅದನ್ನೇ ನಾವು ನಿರೀಕ್ಷೆ ಮಾಡುತ್ತೇವೆ. ಗಡಿಯಲ್ಲಿ ಚೀನಾ ಒಪ್ಪಂದವನ್ನು ನೆನಪಿಸಿ ಯಥಾಸ್ಥಿತಿ ಇದ್ದರೆ ಈ ಸಾವು ನೋವು ತಪ್ಪಿಸಬಹುದಿತ್ತು. ಆದರೆ ಚೀನಾ ಒಪ್ಪಂದವನ್ನು ಅನುಸರಿಸಿಲ್ಲ ಎಂದು ಹೇಳಿದ್ದಾರೆ.