ನವದೆಹಲಿ, ಜೂ 17 (DaijiworldNews/PY) : ಸೋಮವಾರ ಪೂರ್ವ ಲಡಾಕ್ನ ಗಲ್ವಾನ್ ಕಣಿವೆ ಭಾಗದಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಸೈನಿಕರಿಂದ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ಘಟನೆ ನೋವನ್ನುಂಟು ಮಾಡಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ಅವರ ಕುಟುಂಬಸ್ಥರೊಂದಿಗೆ ನಾವು ಖಂಡಿತವಾಗಿಯೂ ಇರುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
20 ಮಂದಿ ಯೋಧರ ತ್ಯಾಗ, ಬಲಿದಾನ ವಿಷಯವು ಮನಸ್ಸಿಗೆ ತೀವ್ರವಾದ ನೋವನ್ನುಂಟು ಮಾಡಿದೆ. ನಮ್ಮ ಸೈನಿಕರು ದೇಶವನ್ನು ಕಾಪಾಡುವ, ದೇಶದ ಘನತೆ, ಗೌರವಗಳನ್ನು ಎತ್ತಿ ಹಿಡಿಯುವ ವಿಚಾರದಲ್ಲಿ ವಿಶೇಷವಾದ ಧೈರ್ಯ, ಸಾಹಸ ಮೆರೆದಿದ್ದಾರೆ. ತಮ್ಮ ಪ್ರಾಣಕ್ಕಿಂತ ದೇಶವೇ ಮುಖ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ಧಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ದೇಶ ಯಾವತ್ತಿಗೂ ಹುತಾತ್ಮ ಯೋಧರ ವೀರ ಬಲಿದಾನವನ್ನು ಮರೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ನಾವು ಅವರ ಕುಟುಂಬಸ್ಥರೊಂದಿಗೆ ಇರುತ್ತೇವೆ ಎಂದಿದ್ದಾರೆ.