ಮುಂಬೈ, ಜೂ.17 (DaijiworldNews/MB) : ಲಡಾಖ್ ಗಡಿಯಲ್ಲಿ ಸಂಘರ್ಷ ಹುಟ್ಟು ಹಾಕಿ, ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಬುಧವಾರ ಶಿವಸೇನಾ ಆಗ್ರಹಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನಾ ಮುಖವಾಣಿ ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕರೂ ಆಗಿರುವ ಸಂಜತ್ ರಾವತ್, ಚೀನಾಕ್ಕೆ ಯಾವಾಗ ಸೂಕ್ತವಾದ ಉತ್ತರ ಸಿಗುತ್ತದೆ? ಗುಂಡು ಹಾರಿಸದೆ, ನಮ್ಮ 20 ಸೈನಿಕರು ಹುತಾತ್ಮರಾಗಿದ್ದಾರೆ. ನಾವು ಏನು ಮಾಡಿದ್ದೇವೆ? ಚೀನಾದ ಎಷ್ಟು ಯೋಧರ ಹತ್ಯೆಯಾಗಿದೆ? ಚೀನಾ ಚೀನಾ ನಮ್ಮ ಭೂಮಿಗೆ ಪ್ರವೇಶಿಸಿದೆಯೇ? ಪ್ರಧಾನಿ ಮೋದಿಯವರೇ ಈ ಸಮಯದಲ್ಲಿ ದೇಶ ನಿಮ್ಮೊಂದಿಗಿದೆ. ಆದರೆ ಸತ್ಯ ಏನು ಎಂದು ಹೇಳಿ. ದೇಶ ಸತ್ಯವನ್ನು ತಿಳಿಯಲು ಬಯಸುತ್ತದೆ ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಪ್ರಧಾನಿ, ನೀವು ಶೂರ ಮತ್ತು ಯೋಧ. ನಿಮ್ಮ ನಾಯಕತ್ವದಲ್ಲಿ ದೇಶವು ಚೀನಾದ ವಿರುದ್ಧ ಸೇಡು ತೀರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಗಾಲ್ವನ್ ಕಣಿವೆಯಲ್ಲಿ ಉಭಯ ದೇಶಗಳ ನಡುವೆ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ.