ಬೆಂಗಳೂರು, ಜೂ 17 (DaijiworldNews/PY) : ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಚಿನ್ ಪಿಂಗ್ 2014ರಿಂದ 18 ಬಾರಿ ಸಭೆ ನಡೆಸಿದ್ದಾರೆ. ಮೋದಿ ಅವರು ಚೀನಾ ದೇಶಕ್ಕೆ ಐದು ಬಾರಿ ಹೋಗಿ ಬಂದಿದ್ದಾರೆ. ಕಳೆದ 70 ವರ್ಷಗಳಲ್ಲಿ ಇಷ್ಟೊಂದು ಬಾರಿ ಚೀನಾಕ್ಕೆ ಭೇಟಿ ನೀಡಿದ ಬೇರೊಬ್ಬ ಪ್ರಧಾನಿಯಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಚಿನ್ ಪಿಂಗ್ 2014ರಿಂದ 18 ಬಾರಿ ಸಭೆ ನಡೆಸಿದ್ದಾರೆ. ಮೋದಿ ಅವರು ಚೀನಾ ದೇಶಕ್ಕೆ ಐದು ಬಾರಿ ಹೋಗಿ ಬಂದಿದ್ದಾರೆ. ಕಳೆದ 70 ವರ್ಷಗಳಲ್ಲಿ ಇಷ್ಟೊಂದು ಬಾರಿ ಚೀನಾಕ್ಕೆ ಭೇಟಿ ನೀಡಿದ ಬೇರೊಬ್ಬ ಪ್ರಧಾನಿಯಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಪ್ರಧಾನಿ ಮೋದಿ ಅವರು ಶಾಂತಿ, ಸೌಹಾರ್ದತೆ ಒಪ್ಪಂದದ ಭಾಗವಾಗಿ ಹಲವು ದ್ವಿಪಕ್ಷೀಯ ಒಪ್ಪಂದ ಹಾಗೂ ಶಿಷ್ಟಾಚಾರಗಳಿಗೆ ಸಹಿ ಹಾಕಿದ್ದಾರೆ. ಇದರಿಂದ ದೊರಕಿದ ಫಲಿತಾಂಶವೇನು ಎಂದು ಕಾಂಗ್ರೆಸ್ ಕೇಳಿದೆ.
ಭಾರತ-ಚೀನಾ ನಡುವೆ 1967ರ ಬಳಿಕ ನಡೆದ ಗಡಿ ಸಂಘರ್ಷದಲ್ಲಿ ಈ ಬಾರಿ ಹಿಂದೆದೂ ಕಂಡರಿಯದಷ್ಟು ಸಾವು-ನೋವು ಸಂಭವಿಸಿದೆ. ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಯೋಧರ ತ್ಯಾಗ, ಬಲಿದಾನಕ್ಕೆ ಯಾರು ಹೊಣೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ನಮ್ಮ ಸೈನ್ಯಾಧಿಕಾರಿಗಳು ಹಾಗೂ ಯೋಧರನ್ನು ನೆನೆದು ನಾನ ಅನುಭವಿಸುತ್ತಿರುವ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರಿಗೆ ಶ್ರದ್ದಾಂಜಲಿ ಅರ್ಪಿಸುತ್ತಾ, ಅವರ ಕುಟುಂಬಸ್ಥರ ದುಃಖದಲ್ಲಿ ನಾವೂ ಭಾಗಿಗಳು. ನಾವು ಅವರೊಂದಿಗೆ ಇರುತ್ತೇವೆ ಎಂದು ಹೇಳಿದ್ದರು.