ನವದೆಹಲಿ, ಜೂ.17 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ಕರಣ್ ಜೋಹರ್ ಸೇರಿದಂತೆ 8 ಜನರ ವಿರುದ್ಧ ವಕೀಲರೊಬ್ಬರು ಸ್ಥಳೀಯ ಕೋರ್ಟ್ ಒಂದರಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
ವಕೀಲರು ದೂರಿನಲ್ಲಿ ಅವರು, ಸುಶಾಂತ್ ಸಿಂಗ್ ಆತ್ಮಹತ್ಯೆಗೆ 8 ಮಂದಿ ಕಾರಣವಾಗಿದ್ದಾರೆ. ಹಾಗಾಗಿ ಇದನ್ನು ಕೊಲೆ ಎಂದು ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ಸುಶಾಂತ್ ಸಿನಿಮಾ ಬಿಡುಗಡೆಯಾಗಲು ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿ ಆದಿತ್ಯ ಚೋಪ್ರಾ, ಸಾಜಿದ್ ನಾದಿಯಡ್ವಾಲ, ಸಂಜಯ್ ಲೀಲಾ ಭನ್ಸಾಲಿ, ಭೂಷಣ್ ಕುಮಾರ್, ಏಕ್ತಾ ಕಪೂರ್ ಮತ್ತು ನಿರ್ದೇಶಕ ದಿನೇಶ್ ವಿರುದ್ಧವೂ ದೂರು ನೀಡಲಾಗಿದೆ.
ಈ ದೂರನ್ನು ಸ್ಥಳೀಯ ಕೋರ್ಟ್ನಲ್ಲಿ ದಾಖಲು ಮಾಡಲಾಗಿದ್ದು ಜುಲೈ 3ರಂದು ಪ್ರಕರಣವನ್ನು ಆಲಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.